ಕರ್ನಾಟಕ

karnataka

ETV Bharat / state

ಬೀಗರೂಟ ಮುಗಿಸಿ ಬರುತ್ತಿದ್ದ ಕುಟುಂಬಕ್ಕೆ ಎದುರಾದ ಯಮರಾಯ: ಮೂವರು ದುರ್ಮರಣ - Mandya_accident

ಬೀಗರ ಊಟ ಮುಗಿಸಿಕೊಂಡು ಬರುತ್ತಿದ್ದ ಕುಟುಂಬಕ್ಕೆ ಎದುರಾದ ಜವರಾಯ. ಒಂದೇ ಕುಟುಂಬದ ಮೂವರು ದುರ್ಮರಣ. ಮಂಡ್ಯ ಜಿಲ್ಲೆಯ ಮಳvಳ್ಳಿ ತಾಲೂಕಿನಲ್ಲಿ ಭೀಕರ ಅಪಘಾತ.

ರಸ್ತೆ ಅಪಘಾತದಲ್ಲಿ ಮೂವರು ಸಾವು

By

Published : Jun 2, 2019, 9:56 PM IST

ಮಂಡ್ಯ: ಬೀಗರ ಔತಣಕೂಟ ಮುಗಿಸಿ ಕಾರಿನಲ್ಲಿ ಊರಿಗೆ ಬರುತ್ತಿದ್ದ ಒಂದೇ ಕುಟುಂಬದ ಮೂವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಓರ್ವ ತೀವ್ರವಾಗಿ ಗಾಯಗೊಂಡಿದ್ದಾರೆ. ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ನಡೆದಿದೆ.

ಮೃತರನ್ನು ತಳಗವಾದಿ ಗ್ರಾಮದ ಜಾನಕಮ್ಮ(48), ಸೌಭಾಗ್ಯ (45) ಹಾಗೂ ಅಶೋಕ್ ಎಂದು ಗುರುತಿಸಲಾಗಿದೆ. ಜಯಶೀಲ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬೀಗರ ಊಟ ಮುಗಿಸಿಕೊಂಡು ಕುಟುಂಬದ ಸದಸ್ಯರನ್ನು ಅಶೋಕ್ ಸ್ವಿಪ್ಟ್ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದಾಗ, ಎದುರಿನಿಂದ ಬಂದ ಬೊಲೆರೋ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

ABOUT THE AUTHOR

...view details