ಕರ್ನಾಟಕ

karnataka

ETV Bharat / state

ಅಪಘಾತಕ್ಕೀಡಾದ ಕಾರಿನಲ್ಲಿದ್ದವರ ರಕ್ಷಿಸಲು ಹೋದ ಮೂವರ ದಾರುಣ ಸಾವು - Mandya_accident

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದನ್ನು ಗಮನಿಸಿ, ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಹೋದ ಮೂವರು ವಿದ್ಯುತ್​ ಶಾಕ್​ಗೊಳಗಾಗಿ ಸಾವನ್ನಪ್ಪಿದ್ದಾರೆ.

ಮದ್ದೂರು ತಾಲ್ಲೂಕಿನ ಬಿದರಹೊಸಹಳ್ಳಿ ಗೇಟ್ ಬಳಿ ಕಾರು ಅಪಘಾತ

By

Published : Jun 12, 2019, 10:55 PM IST

ಮಂಡ್ಯ: ಕಾರು ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಣೆ ಮಾಡಲು ಮುಂದಾದವರೇ ಸಾವಿಗೀಡಾದ ಘಟನೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗೇಟ್ ಬಳಿ ನಡೆದಿದೆ.

ಮದ್ದೂರು ತಾಲ್ಲೂಕಿನ ಬಿದರಹೊಸಹಳ್ಳಿ ಗೇಟ್ ಬಳಿ ಕಾರು ಅಪಘಾತ

ಘಟನೆಯಲ್ಲಿ ರಕ್ಷಣೆಗೆ ಧಾವಿಸಿದ್ದ ಪ್ರಸನ್ನ, ಪುಟ್ಟ ಹಾಗೂ ಮತ್ತೊಬ್ಬರು ಸಾವಿಗೀಡಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳವಳ್ಳಿ ಕಡೆಯಿಂದ ಬರುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಪುಟ್ಟ, ಪ್ರಸನ್ನ ಹಾಗೂ ಮತ್ತೊಬ್ಬರು ರಕ್ಷಣೆ ಮಾಡಲು ಹೋಗಿದ್ದಾರೆ. ಆದರೆ ರಕ್ಷಣೆಗೆ ಹೋಗುವ ತರಾತುರಿಯಲ್ಲಿ ವಿದ್ಯುತ್ ತಂತಿ ತುಂಡರಿಸಿ ಬಿದ್ದಿದ್ದನ್ನು ನೋಡದೇ ಕಾರನ್ನು ಸ್ಪರ್ಶಿಸಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details