ಮಂಡ್ಯ: ಅಕ್ರಮ ಗೋ ಸಾಗಾಣಿಕೆದಾರರ ವಾಹನದಿಂದ ರಸ್ತೆ ಬದಿ ಬಿದ್ದು ನರಳಾಡುತ್ತಿದ್ದ ಕರುವನ್ನು ಸಾರ್ವಜನಿಕರು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಬೀರವನಹಳ್ಳಿ ಬಳಿ ನಡೆದಿದೆ.
ಆಹಾರವಿಲ್ಲದೆ ಅಸ್ವಸ್ಥಗೊಂಡಿದ್ದ ಕರುವಿಗೆ ಹಾಲು-ನೀರು ನೀಡಿದ ಮಂಡ್ಯ ಪೊಲೀಸರು - Mandya police save calf news
ಆಹಾರ ಇಲ್ಲದೆ ಅಸ್ವಸ್ಥಗೊಂಡಿದ್ದ ಕರುವನ್ನು ಕಿಕ್ಕೇರಿ ಠಾಣೆಯ ಎಸ್ಐ ನವೀನ್ ಮತ್ತು ಸಿಬ್ಬಂದಿ ಹಾಲು ಮತ್ತು ನೀರು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.
ಆಹಾರವಿಲ್ಲದೆ ಅಸ್ವಸ್ಥಗೊಂಡಿದ್ದ ಕರುವಿಗೆ ಹಾಲು-ನೀರು ಕುಡಿಸಿ ಮಾನವೀಯತೆ ಮೆರೆದ ಪೊಲೀಸರು
ಆಹಾರ ಇಲ್ಲದೆ ಅಸ್ವಸ್ಥಗೊಂಡಿದ್ದ ಕರುವನ್ನು ಕಿಕ್ಕೇರಿ ಠಾಣೆಯ ಎಸ್ಐ ನವೀನ್ ಮತ್ತು ಸಿಬ್ಬಂದಿ ಹಾಲು ಮತ್ತು ನೀರು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.
ಇನ್ನು ಪೊಲೀಸರು ತಾಲ್ಲೂಕಿನ ಅಕ್ರಮ ಗೋ ಸಾಗಾಣಿಕೆ ಜಾಲವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಕರುವಿನ ಆರೋಗ್ಯ ತಪಾಸಣೆ ನೆಡೆಸಿ ಸಮೀಪದ ಗೋ ಶಾಲೆಗೆ ಕಳಿಸಿಕೊಡಲಾಗಿದೆ. ಕಿಕ್ಕೇರಿ ಪೋಲೀಸರ ಕಾರ್ಯಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.