ಮಂಡ್ಯ:ರೇಷ್ಮೆ ಕೃಷಿ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ರೈತರ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮದ್ದೂರು ತಾಲೂಕಿನ ಮುಡೇನಹಳ್ಳಿ ಬಳಿ ನಡೆದಿದೆ.
ಕೃಷಿ ಅಧ್ಯಯನಕ್ಕೆ ತೆರಳಿದ್ದ ಬಸ್ ಪಲ್ಟಿ: ರೇಷ್ಮೆ ಬೆಳೆಗಾರರು ಪ್ರಾಣಾಪಾಯದಿಂದ ಪಾರು - ಮದ್ದೂರು ತಾಲೂಕಿನ ಮುಡೇನಹಳ್ಳಿ
ಕೃಷಿ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ರೈತರ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಮದ್ದೂರು ತಾಲೂಕಿನ ಮುಡೇನಹಳ್ಳಿ ಬಳಿ ನಡೆದಿದೆ.

ಕೃಷಿ ಅಧ್ಯಯನಕ್ಕೆ ತೆರಳಿದ್ದ ಬಸ್ ಪಲ್ಟಿ
ಶ್ರೀರಂಗಪಟ್ಟಣ ತಾಲೂಕಿನ 40ಕ್ಕೂ ಹೆಚ್ಚು ರೈತರು ರೇಷ್ಮೆ ಇಲಾಖೆ ವತಿಯಿಂದ ಖಾಸಗಿ ಬಸ್‌ನಲ್ಲಿ ಕೃಷಿ ಅಧ್ಯಯನ ಪ್ರವಾಸಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ.
ಘಟನೆಯಲ್ಲಿ 10ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆ.ಎಂ.ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.