ಮಂಡ್ಯ: ಕಾವೇರಿ ನದಿ ಪ್ರವಾಹದ ಹಿನ್ನೀರಿಗೆ ಸಾರಿಗೆ ಸಂಸ್ಥೆ ಬಸ್ಸೊಂದು ಸಿಲುಕಿ, ಪ್ರಯಾಣಿಕರು ಪರದಾಡಿದ ಘಟನೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ನಡೆದಿದೆ.
ಪ್ರವಾಹದ ಹಿನ್ನೀರಿನಲ್ಲಿ ಸಿಲುಕಿದ ಬಸ್... ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು ಹೀಗೆ - ಮಂಡ್ಯ ಪ್ರವಾಹ ಸುದ್ದಿ
ಶ್ರೀರಂಗಪಟ್ಟಣದಲ್ಲಿ ಪ್ರವಾಹದ ಮಧ್ಯೆ ಸಿಲುಕಿದ್ದ ಬಸ್ನಲ್ಲಿದ್ದ ಪ್ರಯಾಣಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಪ್ರಯಾಣಿಕರನ್ನು ಏಣಿ ಸಹಾಯದಿಂದ ಕೆಳಗಿಳಿಸಿ ಆತಂಕ ದೂರ ಮಾಡಿದರು. ಪ್ರವಾಹದ ನೀರಿನಲ್ಲಿ ಬಸ್ ತೆಗೆದುಕೊಂಡು ಹೋಗಿದ್ದರಿಂದ ಚಲಿಸಲು ಸಾಧ್ಯವಾಗದೇ ಬಸ್ ನಿಂತಿತ್ತು.
ಕಾವೇರಿ ನೀರು ಪೂರೈಕೆ ಸ್ಥಗಿತ:
ನೀರು ಪೂರೈಕೆ ಯಂತ್ರಗಾರಗಳು ಪ್ರವಾಹ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿರುವ ಹಿನ್ನೆಲೆ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಯಂತ್ರಾಗಾರ ನೀರಿನಲ್ಲಿ ಮುಳುಗಿರೋ ಕಾರಣದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಬೋರ್ವೆಲ್ ನೀರು ಪೂರೈಸಲಾಗುತ್ತಿದೆ. ಪ್ರವಾಹ ಇಳಿಮುಖವಾಗುವವರೆಗೂ ನೀರು ಸರಬರಾಜು ಸಾಧ್ಯವಿಲ್ಲವೆಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.