ಕರ್ನಾಟಕ

karnataka

ಎತ್ತಿನಗಾಡಿ ಜೊತೆ ಹೇಮಾವತಿ ನಾಲೆಗೆ ಬಿದ್ದು ಜೋಡೆತ್ತು ಸಾವು : ರೈತ ಪಾರು

By

Published : Jul 27, 2022, 5:43 PM IST

Updated : Jul 27, 2022, 6:15 PM IST

ಎತ್ತಿನಗಾಡಿಯೊಂದಿಗೆ ಹೇಮಾವತಿ ನಾಲೆಗೆ ಬಿದ್ದ ಜೋಡೆತ್ತು, ಮೇಕೆ- ರೈತ ಪಾರು- ಮಂಡ್ಯ ಜಿಲ್ಲೆಯಲ್ಲಿ ದುರ್ಘಟನೆ

bullock-carts-fell-into-a-canal-in-mandya
ಎತ್ತಿನಗಾಡಿ ಜೊತೆ ಹೇಮಾವತಿ ನಾಲೆಗೆ ಬಿದ್ದ ಎತ್ತುಗಳು : ರೈತ ಪಾರು

ಮಂಡ್ಯ : ಎತ್ತಿನಗಾಡಿಯೊಂದು ಹೇಮಾವತಿ ನಾಲೆಗೆ ಬಿದ್ದು ಜೋಡೆತ್ತುಗಳು ಮತ್ತು ಎತ್ತಿನ ಗಾಡಿಯಲ್ಲಿದ್ದ ಮೇಕೆ ಸಾವನ್ನಪ್ಪಿರುವ ಘಟನೆ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಎತ್ತಿನಗಾಡಿಯಿಂದ ಇಳಿದಿದ್ದ ರೈತ ರಾಜೇಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎತ್ತಿನಗಾಡಿ ಜೊತೆ ಹೇಮಾವತಿ ನಾಲೆಗೆ ಬಿದ್ದು ಜೋಡೆತ್ತು ಸಾವು : ರೈತ ಪಾರು

ರಾಜೇಗೌಡ ತಮ್ಮ ಜಮೀನುನಿಂದ ಮನೆಗೆ ಮರಳುವಾಗ ಎಂದಿನಂತೆ ನೀರು ಕುಡಿಯಲು ಎತ್ತುಗಳು ನಾಲೆಗೆ ಹೋಗಿದ್ದು, ನೀರು ಕುಡಿದು ವಾಪಸಾಗುವಾಗ ನಿಯಂತ್ರಣ ತಪ್ಪಿದ ಎತ್ತಿಗಾಡಿ ಎತ್ತುಗಳ ಸಮೇತ ಪಕ್ಕದ ನಾಲೆಗೆ ಬಿದ್ದಿದೆ. ನೀರಿನ ರಭಸಕ್ಕೆ ಈ ಎತ್ತಿನಗಾಡಿ ಕೊಚ್ಚಿಹೋಗಿದ್ದು, ಸುಮಾರು 200 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕ್ರೇನ್ ಮೂಲಕ ಎತ್ತಿನ‌ಗಾಡಿ ಮತ್ತು ಮೃತ ಎತ್ತುಗಳನ್ನು ಮೇಲಕ್ಕೆತ್ತಿದ್ದಾರೆ.

ಓದಿ :ಬಳ್ಳಾರಿಯಲ್ಲಿ ಸಿಕ್ಕಿಬಿದ್ದ ಖತರ್​ನಾಕ್ ಕಳ್ಳ​ ದಂಪತಿ: ಯಾರೂ ಇಲ್ಲದ ಮನೆಗಳೇ ಇವರ ಟಾರ್ಗೆಟ್​

Last Updated : Jul 27, 2022, 6:15 PM IST

For All Latest Updates

TAGGED:

ABOUT THE AUTHOR

...view details