ಮಂಡ್ಯ: ಭತ್ತದ ದಲ್ಲಾಳಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.
ಹಣ ಪಡೆಯಲು ಹೋದ ದಲ್ಲಾಳಿ ಅನುಮಾನಾಸ್ಪದ ರೀತಿಯಲ್ಲಿ ಸಾವು, ಕೊಲೆ ಶಂಕೆ - ಮಂಡ್ಯ ಕ್ರೈಂ ನ್ಯೂಸ್
ಭತ್ತದ ದಲ್ಲಾಳಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.
![ಹಣ ಪಡೆಯಲು ಹೋದ ದಲ್ಲಾಳಿ ಅನುಮಾನಾಸ್ಪದ ರೀತಿಯಲ್ಲಿ ಸಾವು, ಕೊಲೆ ಶಂಕೆ broker suspicious died in mandya](https://etvbharatimages.akamaized.net/etvbharat/prod-images/768-512-6325529-thumbnail-3x2-net.jpg)
ದೇವರಾಜು ಮೃತ ದಲ್ಲಾಳಿ
ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ದೇವರಾಜು(46) ಸಾವಿಗೀಡಾದ ವ್ಯಕ್ತಿ. ಸಾಲ ಕೊಟ್ಟಿದ್ದ ಹಣ ನೀಡಬೇಕಾಗಿದ್ದ ವ್ಯಕ್ತಿಯ ಮನೆ ಮುಂದೆಯೇ ನೇಣುಬಿಗಿದ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿದೆ. ಕಳೆದ ರಾತ್ರಿ ವ್ಯಾಪಾರದ ಹಣ ಪಡೆಯಲು ದೇವರಾಜು ಅರಕೆರೆ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ ಮುಂಜಾನೆ ಆತನ ಶವ ಪತ್ತೆಯಾಗಿದ್ದು, ದೇವರಾಜು ಪೋಷಕರು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ದೂರು ನೀಡಿದ್ದಾರೆ.
ಸ್ಥಳಕ್ಕೆ ಅರಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.