ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕಳೆದ ರಾತ್ರಿ ಕುಸಿದು ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನು ನಾಗಮಂಗಲ ತಾಲೂಕಿನ ಬೋನಕೆರೆ ಗ್ರಾಮದ ಕೆರೆಯ ಏರಿ ಒಡೆದು 200 ಎಕೆರೆ ವಿಸ್ತೀರ್ಣದ ಕೆರೆ ಸಂಪೂರ್ಣವಾಗಿ ಬರಿದಾಗಿದೆ. ಕೆರೆ ಏರಿ ಒಡೆಯುತ್ತಿದ್ದಂತೆ ಸಂಪೂರ್ಣ ಬೆಳೆಗಳು ಕೊಚ್ಚಿ ಹೋಗಿದೆ.
ನಾಗಮಂಗಲದಲ್ಲಿ ಸೇತುವೆ ಕುಸಿತ: ಸಂಪರ್ಕ ಸಾಧ್ಯವಾಗದೆ ಗ್ರಾಮಸ್ಥರ ಪರದಾಟ - Rain in Nagamangala taluk mandya
ನಾಗಮಂಗಲ ತಾಲ್ಲೂಕಿನ ಗಿಡುವಿನ ಹೊಸಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕಳೆದ ರಾತ್ರಿ ಕುಸಿದು ಗ್ರಾಮಸ್ಥರು ಪರದಾಡುವಂತಾಗಿದೆ.
ನಾಗಮಂಗಲ ತಾಲ್ಲೂಕಿನಲ್ಲಿ ಸೇತುವೆ ಕುಸಿತ : ಗ್ರಾಮಸ್ಥರ ಪರದಾಟ
ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಆವಾಂತರ ಸೃಷ್ಟಿ ಮಾಡಿದ್ದು, ಕೆಆರ್ ಪೇಟೆ ತಾಲೂಕಿನಲ್ಲಿ ಶೆಟ್ಟಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆ ಕುಸಿದು, ಹೋಗಿ ಮೇಲ್ಛಾವಣಿ ಕುಸಿದಿದ್ದರಿಂದ ನಷ್ಟ ಉಂಟಾಗಿದ್ದು, ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 21, 22 ರಂದು 5.1 ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ಬಾರಿ ವೇಳೆಗೆ 43.1 ಮಿಲೀ ಮೀಟರ್ನಷ್ಟು ಮಳೆಯಾಗಿದೆ. ಬರ ಪ್ರದೇಶವಾದ ನಾಗಮಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ.