ಕರ್ನಾಟಕ

karnataka

ETV Bharat / state

ಒಣ ಹುಲ್ಲಿನ ಬಣವೆಗೆ ಬೆಂಕಿಯಿಟ್ಟ ಬಾಲಕ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ! - mandya latest news

ಚಾಮುಂಡೇಶ್ವರಿ ನಗರದಲ್ಲಿ ಬಾಲಕನೊಬ್ಬ ಆಟವಾಡುವ ನೆಪದಲ್ಲಿ ಬಂದು ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

boy sets grass on fire in mandya
ಒಣ ಹುಲ್ಲಿನ ಬವಣೆಗೆ ಬೆಂಕಿಯಿಟ್ಟ ಬಾಲಕ

By

Published : Sep 23, 2021, 1:40 PM IST

Updated : Sep 23, 2021, 2:15 PM IST

ಮಂಡ್ಯ: ಮಂಡ್ಯದ ಚಾಮುಂಡೇಶ್ವರಿ ನಗರದ ಬಾಲಕನೊಬ್ಬ ಹುಲ್ಲಿನ ಮೆದೆಗೆ ಬೆಂಕಿಯಿಟ್ಟ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಒಣ ಹುಲ್ಲಿನ ಬಣವೆಗೆ ಬೆಂಕಿಯಿಟ್ಟ ಬಾಲಕ

ಹೌದು, ಬಾಲಕನೋರ್ವ ಆಟ ಆಡುವ ನೆಪದಲ್ಲಿ ಬಂದು ಅನಿಲ್ ಎಂಬುವರು ಹಸುಗಳಿಗೆ ಸಂಗ್ರಹಿಸಿದ್ದ ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಬಾಲಕನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅನುಮಾನಾಸ್ಪದ ಸ್ಫೋಟದಲ್ಲಿ ಮೂವರ ದುರ್ಮರಣ

ಒಣ ಹುಲ್ಲಿನ ಬಣವೆ ಸಂಪೂರ್ಣ ಭಸ್ಮವಾಗಿದ್ದು, ಮಾಲೀಕ ಕಣ್ಣೀರು ಹಾಕುವಂತಾಗಿದೆ. ಸದ್ಯ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Last Updated : Sep 23, 2021, 2:15 PM IST

ABOUT THE AUTHOR

...view details