ಕರ್ನಾಟಕ

karnataka

ETV Bharat / state

ಈಜಲು ಹೋಗಿದ್ದ ಬಾಲಕ ನೀರುಪಾಲು - Boy drown

ಪ್ರವಾಸಕ್ಕೆ ತೆರಳಿದ್ದ ಬಾಲಕನೋರ್ವ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಘಟನೆ ಜಿಲ್ಲೆಯ ದುದ್ದ ಹೋಬಳಿಯ ಗುನ್ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕ ಹೇಮಂತ್‌ಗೌಡ

By

Published : Apr 30, 2019, 7:36 AM IST

ಮಂಡ್ಯ:ನಾಲೆಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರುಪಾಲಾದ ಘಟನೆ ದುದ್ದ ಹೋಬಳಿಯ ಗುನ್ನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ನಾಗಮಂಗಲ ತಾಲೂಕಿನ ಬಾಲ ಅಗ್ರಹಾರ ಗ್ರಾಮದ ರವಿ ಎಂಬುವರ ಪುತ್ರ ಹೇಮಂತ್‌ಗೌಡ (15) ಮೃತ ಬಾಲಕ ಎಂದು ತಿಳಿದು ಬಂದಿದೆ.

ಮೇಲುಕೋಟೆಗೆಂದು ಪ್ರವಾಸಕ್ಕೆ ತೆರಳಿದ್ದ ಹೇಮಂತ್‌ಗೌಡ ಹಾಗೂ ಆತನ ಸ್ನೇಹಿತರು ಪ್ರವಾಸ ಮುಗಿಸಿ ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗಲು ಯೋಚಿಸಿದ್ದರು. ಅದಕ್ಕೂ ಮೊದಲು ನಾಲೆಯಲ್ಲಿ ಈಜಲು ತೆರಳಿದ್ದಾಗ ನೀರಿನ ಸೆಳೆತಕ್ಕೆ ಹೇಮಂತ್‌ಗೌಡ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗುತ್ತಿದೆ.

ಮದ್ದೂರು ತಾಲೂಕಿನ ಶಿವಾರದ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸ್ನೇಹಿತರೆಲ್ಲರೂ ರಜೆ ಇದ್ದ ಕಾರಣ ಮೇಲುಕೋಟೆ ಚಲುವನಾರಾಯಣನ ದರ್ಶನಕ್ಕೆ ಬಂದಿದ್ದರು. ದರ್ಶನ ಪಡೆದು ಗುನ್ನಾಯಕನಹಳ್ಳಿ ಗ್ರಾಮದ ಸ್ನೇಹಿತ ಗುಣಶೀಲಗೌಡನ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಈಜುವುದಕ್ಕೂ ಮೊದಲು ಬೈಕ್​​ ಟ್ಯೂಬ್​ಗಳನ್ನು ನಡುವಿಗೆ ಕಟ್ಟಿಕೊಂಡು ನಾಲೆಗೆ ಇಳಿದಿದ್ದರು. ಆದರೂ ನೀರಿನ ಸೆಳೆತಕ್ಕೆ ಹೇಮಂತ್‌ಗೌಡ ಕೊಚ್ಚಿಕೊಂಡು ಹೋಗಿದ್ದು, ಗುಣಶೀಲಗೌಡನನ್ನು ಕಾಪಾಡಲಾಗಿದೆ. ಶವ ಪತ್ತೆಗಾಗಿ ಶಂಭೂನಹಳ್ಳಿ ಗ್ರಾಮದ ಬಳಿ ಕಾಲುವೆಯಲ್ಲಿ ಶಿವಳ್ಳಿ ಪೊಲೀಸರು ಶೋಧ ಮಾಡುತ್ತಿದ್ದಾರೆ. ಆದರೆ ಇನ್ನೂ ಶವ ಪತ್ತೆಯಾಗಿಲ್ಲ ಎನ್ನಲಾಗಿದೆ.

ABOUT THE AUTHOR

...view details