ಮಂಡ್ಯ: ಎತ್ತಿನ ಗಾಡಿಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವಿಗೀಡಾದ ಹಿನ್ನೆಲೆಯಲ್ಲಿ ನೊಂದ ರೈತ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಬಳಿ ನಡೆದಿದೆ.
ಎತ್ತಿನ ಗಾಡಿಗೆ ಗುದ್ದಿ ಬೈಕ್ ಸವಾರ ಸಾವು: ನೊಂದು ರೈತ ಆತ್ಮಹತ್ಯೆ! - mandya latest news
ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಬಳಿ ತಮ್ಮ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಎಂದು ನೊಂದ ರೈತ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎತ್ತಿನ ಗಾಡಿಗೆ ಗುದ್ದಿ ಬೈಕ್ಸವಾರ ಸಾವು: ಮನನೊಂದು ರೈತ ಆತ್ಮಹತ್ಯೆ!
ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಬಳಿ ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಯುವಕ ಮಹೇಶ(23) ಸಾವಿಗೀಡಾಗಿದ್ದರು. ಮುಡುಕುತೊರೆ ಜಾತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಬರಿಗೊಂಡ ಎತ್ತಿನಗಾಡಿಯ ಮಾಲೀಕ ಅಕ್ಮಲ್ ಹುಂಡಿ ಗ್ರಾಮದ ಬಸವಣ್ಣ(55) ಎಂಬವರು ಮನೆಯ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.