ಮಂಡ್ಯ:ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಎರಡು ರಾಷ್ಟ್ರೀಯ ಪಕ್ಷಗಳೇ ಕಾರಣ. ಮೊದಲು ಹಿಜಾಬ್‌ನಿಂದ ಶುರುವಾದ ಘಟನೆ ಈಗ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಜನರನ್ನು ಒಡೆದಾಳುವ ನೀತಿಯ ಅನುಸರಿಸುತ್ತಿದ್ದಾರೆ. ಇದು ದೇಶಕ್ಕೆ ಮಾರಕ ಎಂದು ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
ಇಂದು ಮಂಡ್ಯಕ್ಕೆ ಆಗಮಿಸಿದ ಅವರು, ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಈದ್ಗಾ ಮೈದಾನ ವಿಚಾರ ಬಗೆಹರಿಸುವ ವೇಳೆ ಹೀಗೆಯೇ ಮಾಡಿದ್ರು. ಒಬ್ಬ ಮಾಜಿ ಮಂತ್ರಿ ಹುಬ್ಬಳ್ಳಿಯವರೇ ವಿರೋಧ ಮಾಡಿದ್ರು. ನಮ್ಮ ಪಾರ್ಟಿಗೆ ಡ್ಯಾಮೇಜ್ ಎಂದು ಅವರನ್ನು ಹೊರಹಾಕಿದೆ. ಯಡಿಯೂರಪ್ಪ ಅವರು ಹೇಗೆ ಮಾಡ್ತೀರಿ ನೋಡ್ತಿನಿ ಅಂದ್ರು. ಸರ್ಕಾರಕ್ಕೆ ಶಕ್ತಿ ಇದೆ, ಏನು ಮಾಡಬೇಕು ಅಂತ ಗೊತ್ತಿದೆ. ನೀವು ಎಷ್ಟು ಕೂಗಿದ್ರೂ ನಾನು ಹೆದರುವುದಿಲ್ಲ ಅಂತ ಹೇಳಿ, ಎಲ್ಲೆಲ್ಲಿ ಯಾರನ್ನು ಅರೆಸ್ಟ್ ಮಾಡಿಸಬೇಕೋ ಮಾಡಿದೆ ಎಂದರು.