ಮಂಡ್ಯ: ಸೆಣಸಾಟದಲ್ಲಿ ಚಿರತೆ ಹಾಗೂ ನಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಅಣ್ಣೆಚಾಕನಹಳ್ಳಿ ಗ್ರಾಮಕ್ಕೆ ನುಗ್ಗಿದ ಎಂಟು ತಿಂಗಳ ಚಿರತೆ, ನಾಯಿ ಬೇಟೆಯಾಡಲು ಪ್ರಯತ್ನಿಸಿದೆ. ಆದರೆ, ಈ ಫೈಟ್ನಲ್ಲಿ ಎರಡೂ ಪ್ರಾಣಿಗಳು ಪ್ರಾಣ ಬಿಟ್ಟಿವೆ.