ಕರ್ನಾಟಕ

karnataka

ETV Bharat / state

ತಾಯಿ ಕಳೆದುಕೊಂಡು ಖಿನ್ನತೆಗೊಳಗಾದ.. ಬೇಸರದಿಂದ ನದಿಯಲ್ಲಿ ಬಿಎಂಡಬ್ಲ್ಯೂ ಮುಳುಗಿಸಿ ತೆರಳಿದ! - ಭಿನ್ನತೆಯಿಂದ ಕಾವೇರಿ ನದಿಯಲ್ಲಿ ಕಾರು ಮುಳುಗಿಸಿದ ವ್ಯಕ್ತಿ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿ ತೆರಳಿದ ಘಟನೆ ಬೆಳಕಿಗೆ ಬಂದಿದೆ.

bmw-car-found-in-cauvery-river-at-mandya
ಕಾವೇರಿ ನದಿಯಲ್ಲಿ ಬಿಎಂಡಬ್ಲ್ಯೂ ಮುಳುಗಿಸಿ ತೆರಳಿದ ವ್ಯಕ್ತಿ

By

Published : May 27, 2022, 4:05 PM IST

ಮಂಡ್ಯ:ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿ ಕಾವೇರಿ ನದಿಯಲ್ಲಿ ಐಷಾರಾಮಿ ಕಾರು ಪತ್ತೆಯಾಗಿದೆ. ಕಾರಿನ ಬಗ್ಗೆ ಪರಿಶೀಲನೆ ಪೊಲೀಸರು ವಿಚಾರಣೆ ನಡೆಸಿದಾಗ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ನದಿಯಲ್ಲಿ ಕಾರು ಕಂಡುಬಂದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಳಿಕ ಸ್ಥಳಕ್ಕಾಗಮಿಸಿ ಕಾರನ್ನು ನದಿಯಿಂದ ಹೊರ ತೆಗೆಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಮಾನಸಿಕ ಖಿನ್ನತೆಯಿಂದ ಬಳುತ್ತಿದ್ದ ಬೆಂಗಳೂರಿನ ವ್ಯಕ್ತಿ ಕಾವೇರಿ ನದಿಯಲ್ಲಿ ಕಾರನ್ನು ಮುಳುಗಿಸಿ ತೆರಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ಎಂಬಾತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ತನ್ನ ತಾಯಿ ನಿಧನದ ಬಳಿಕ ತೀವ್ರ ಮಾನಸಿಕ ಖಿನ್ನತೆಗೊಳಗಾದ ಈತ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ತನ್ನ ಬಿಎಂಡಬ್ಲ್ಯೂ ಕಾರನ್ನು ನದಿಯಲ್ಲಿ ಮುಳುಗಿಸಿ ವಾಪಸ್​​ ತೆರಳಿದ್ದಾನೆ.

ಪೊಲೀಸರು ಕಾರಿನ ಪರಿಶೀಲನೆ ನಡೆಸಿ, ಮಾಲೀಕನ್ನು ಪಟ್ಟಣ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತನ ಖಿನ್ನತೆ ವಿಚಾರ ಗೊತ್ತಾಗಿದೆ. ಬಳಿಕ ಸಂಬಂಧಿಕರನ್ನು ಠಾಣೆಗೆ ಕರೆಸಿದ ಪೊಲೀಸರು ಅವರ ಹೇಳಿಕ ಆಧರಿಸಿ ಪ್ರಕರಣ ಖುಲಾಸೆ ಮಾಡಿದ್ದಾರೆ.

ಇದನ್ನೂ ಓದಿ:ಕಂದಕಕ್ಕೆ ಉರುಳಿ ಬಿದ್ದ ಕಾರು: ಶಾಸಕ ನಡಹಳ್ಳಿ ಆಪ್ತ ಸಹಾಯಕ ಪಾರು

ABOUT THE AUTHOR

...view details