ಮಂಡ್ಯ:ದಕ್ಷಿಣ ಗಂಗೆ ಎಂದು ಪ್ರಸಿದ್ಧಿ ಪಡೆದಿರುವ ಕಾವೇರಿ ಮಡಿಲಲ್ಲಿ ಸಂಪ್ರದಾಯದ ಹೆಸರಲ್ಲಿ ವಶೀಕರಣ, ವಾಮಾಚಾರದಂತಹ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಹದಿಹರೆಯದ ಹೆಣ್ಣು ಮಕ್ಕಳೇ ಇದಕ್ಕೆ ಬಲಿಯಾಗುತ್ತಿದ್ದು, ಕಾವೇರಮ್ಮನ ತೀರ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಸ್ಥಿ ವಿಸರ್ಜನೆ ಮಾಡಿದ್ದ ಸ್ಥಳ ಸದ್ಯ ಮಾಟ, ಮಂತ್ರ ಹಾಗೂ ವಾಮಾಚಾರ ಚಟುವಟಿಕೆ ಮೂಲಕ ಅಪವಿತ್ರವಾಗುತ್ತಿದೆ. ಯುವತಿಯರನ್ನೇ ಟಾರ್ಗೆಟ್ ಮಾಡಿ ವಶೀಕರಣ ಮೂಲಕ ಕಾವೇರಿ ಪಾವಿತ್ರ್ಯತೆಗೆ ಧಕ್ಕೆ ತರಲಾಗುತ್ತಿದೆ. ಇದಕ್ಕೆ ಸಾಕ್ಷಿಗಳು ಸಾಕಷ್ಟು ಸಿಕ್ಕಿವೆ. ಕಾವೇರಿ ಒಡಲಲ್ಲಿ ಹೆಣ್ಣು ಮಕ್ಕಳನ್ನು ಕೂರಿಸಿಕೊಂಡು ನಿರ್ಭಯವಾಗಿ ವಶೀಕರಣದಂತಹ ಪೂಜೆ ಮಾಡಲಾಗುತ್ತಿದೆ. ಬೆಳಗಿನ ಸಮಯದಲ್ಲೇ ಬ್ಲಾಕ್ ಮ್ಯಾಜಿಕ್‌ನಂತಹ ಪೂಜೆಗಳು ನೆರವೇರುತ್ತಿವೆ ಎನ್ನಲಾಗ್ತಿದೆ.