ಮಂಡ್ಯ :ಜಿಲ್ಲೆಯಲ್ಲಿ ಮೂವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಕಪ್ಪು ಶಿಲೀಂದ್ರ ರೋಗಿಗಳಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲಾಗದೇ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 487ಕ್ಕೆ ಏರಿಕೆಯಾಗಿದೆ.
ಅಂತೆಯೇ ಮಂಡ್ಯ ಹಾಗೂ ಮದ್ದೂರು ತಾಲೂಕಿನಲ್ಲಿ ತಲಾ 87, ಮಳವಳ್ಳಿ 93, ಪಾಂಡವಪುರ 22, ಶ್ರೀರಂಗಪಟ್ಟಣ 65, ಕೆ.ಆರ್.ಪೇಟೆ 40, ನಾಗಮಂಗಲ 50 ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದಂತೆ 446 ಜನರಲ್ಲಿ ಸೋಂಕು ಕಾಣಿಸಿದೆ.
ಇನ್ನು, ಮಂಡ್ಯ ತಾಲೂಕಿನ 149, ಮದ್ದೂರಿನ 103, ಮಳವಳ್ಳಿಯ 85, ಪಾಂಡವಪುರದ 74, ಶ್ರೀರಂಗಪಟ್ಟಣದ 94, ಕೆ.ಆರ್.ಪೇಟೆಯ 85, ನಾಗಮಂಗಲದ 41 ಹಾಗೂ ಹೊರ ಜಿಲ್ಲೆಯ ಮೂವರು ಸೇರಿದಂತೆ 634 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 4,393 ಸಕ್ರಿಯ ಪ್ರಕರಣಗಳಿವೆ. 444 ಜನರು ಸರ್ಕಾರಿ ಆಸ್ಪತ್ರೆಯಲ್ಲಿ, 77 ಜನರು ಖಾಸಗಿ ಆಸ್ಪತ್ರೆಯಲ್ಲಿ, 1,570 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಗೂ 2,302 ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5,538 ಜನರ ಗಂಟಲ ದ್ರವ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಪತ್ನಿ ಸಾವಿನಿಂದ ಮಾನಸಿಕ ಖಿನ್ನತೆ: ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ!