ಮಂಡ್ಯ : ಟಿಪ್ಪು ಎಕ್ಸಪ್ರೆಸ್ ಹೆಸರು ಬದಲಿಸಿ ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಮೈಸೂರಿನಿಂದ ಮಂಡ್ಯಕ್ಕೆ ಆಗಮಿಸಿದ ಒಡೆಯರ್ ಎಕ್ಸಪ್ರೆಸ್ ಟ್ರೈನ್ ಗೆ ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಸಿ ಪಿ ಉಮೇಶ್ ನೇತೃತ್ವದಲ್ಲಿ ಬಾಳೆ ಕಂದು, ಬಲೂನ್ ಕಟ್ಪಿ, ಬೂದಗುಂಬಳ ಹೊಡೆದು ಪೂಜೆ ಸಲ್ಲಿಸಲಾಯಿತು. ಬಳಿಕ ಪ್ರಯಾಣಿಕರಿಗೆ ಕಾರ್ಯಕರ್ತರು ಸಿಹಿತಿಂಡಿ ಹಂಚಿದರು.
ಮಂಡ್ಯ : ಒಡೆಯರ್ ಎಕ್ಸ್ಪ್ರೆಸ್ಗೆ ಪೂಜೆ ಸಲ್ಲಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು - ಈಟಿವಿ ಕನ್ನಡ ಭಾರತ್
ಮೈಸೂರಿನಿಂದ ಮಂಡ್ಯ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಒಡೆಯರ್ ಎಕ್ಸ್ಪ್ರೆಸ್ ಟ್ರೈನ್ಗೆ ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಮಂಡ್ಯ : ಒಡೆಯರ್ ಎಕ್ಸ್ಪ್ರೆಸ್ಗೆ ಪೂಜೆ ಸಲ್ಲಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು
ಇದೇ ವೇಳೆ ಬಿಜೆಪಿ ಪಕ್ಷಕ್ಕೆ ಹಾಗೂ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಕಾರ್ಯಕರ್ತರು ಜೈಕಾರ ಹಾಕಿದರು. ವಿಡಿಯೋ ಕಾಲ್ ಮೂಲಕ ಸಂಸದ ಪ್ರತಾಪ್ ಸಿಂಹಗೆ ಧನ್ಯವಾದ ತಿಳಿಸಿದರು.
ಇದನ್ನೂ ಓದಿ :ಆರ್ಎಸ್ಎಸ್ ಪಥ ಸಂಚಲನದಲ್ಲಿ ಮುಸ್ಲಿಮರಿಂದ ಹೆಡ್ಗೆವಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ