ಕರ್ನಾಟಕ

karnataka

ETV Bharat / state

ಕಬ್ಬು ಬಾಕಿ ಮತ್ತು ಕಾವೇರಿ ನೀರು ಬಿಡುಗಡೆಗಾಗಿ ಬಿಜೆಪಿ ಕಾರ್ಯಕರ್ತರ ಪಂಜಿನ ಮೆರವಣಿಗೆ - Kannada news

ನಗರದ ಸಿಲ್ವರ್ ಜ್ಯುಬ್ಲಿ ಪಾರ್ಕ್‌ನಿಂದ ಪಂಜಿನ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಕೂಡಲೇ ಕಬ್ಬಿನ ಬೆಳೆ ರಕ್ಷಣೆಗಾಗಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದರು.

ಕಬ್ಬು ಬಾಕಿ ಮತ್ತು ಕಾವೇರಿ ನೀರು ಬಿಡುಗಡೆಗಾಗಿ ಬಿಜೆಪಿ ಕಾರ್ಯಕರ್ತರ ಪಂಜಿನ ಮೆರವಣಿಗೆ

By

Published : Jun 21, 2019, 9:10 AM IST

Updated : Jun 21, 2019, 10:36 AM IST

ಮಂಡ್ಯ :ಜಿಲ್ಲೆಯ ರೈತರ ರಕ್ಷಣೆಗಾಗಿ ಬಿಜೆಪಿ ಹೋರಾಟ ಶುರು ಮಾಡಿದೆ. ಕಾವೇರಿ ನೀರು ಬಿಡುಗಡೆ, ಕಬ್ಬು ಬಾಕಿ ಪಾವತಿ ಹಾಗೂ ಮೈಶುಗರ್, ಪಿಎಸ್ಎಸ್‌ಕೆ ಆರಂಭಕ್ಕೆ ಒತ್ತಾಯಿಸಿ ಇಂದು ಪಂಜಿನ ಮೆರವಣಿಗೆ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ನಗರದ ಸಿಲ್ವರ್ ಜ್ಯುಬ್ಲಿ ಪಾರ್ಕ್‌ನಿಂದ ಪಂಜಿನ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಕೂಡಲೇ ಕಬ್ಬಿನ ಬೆಳೆ ರಕ್ಷಣೆಗಾಗಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದರು.

ಕಬ್ಬು ಬಾಕಿ ಮತ್ತು ಕಾವೇರಿ ನೀರು ಬಿಡುಗಡೆಗಾಗಿ ಬಿಜೆಪಿ ಕಾರ್ಯಕರ್ತರ ಪಂಜಿನ ಮೆರವಣಿಗೆ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಕಬ್ಬಿನ ಬಾಕಿಯನ್ನು ಪಾವತಿ ಮಾಡಬೇಕು, ಮೈಶುಗರ್ ಹಾಗೂ ಪಿಎಸ್ಎಸ್‌ಕೆ ಕಾರ್ಖಾನೆ ಆರಂಭ ಮಾಡಬೇಕು ಎಂದು ಒತ್ತಾಯಿಸಿದ ಕಾರ್ಯಕರ್ತರು, ಜೆಡಿಎಸ್ ಅಭ್ಯರ್ಥಿ ಸೋತಿರೋದ್ರಿಂದ ಸಿಎಂ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Last Updated : Jun 21, 2019, 10:36 AM IST

ABOUT THE AUTHOR

...view details