ಕರ್ನಾಟಕ

karnataka

ETV Bharat / state

ಮುಂದಿನ 20 ವರ್ಷ ಬಿಜೆಪಿ ಸರ್ಕಾರ ಇರುತ್ತೆ : ನಳೀನ್ ಕುಮಾರ್ ಕಟೀಲ್

ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ. ಯಾರೇ ಅಕ್ರಮ ಗಣಿಗಾರಿಕೆಯಲ್ಲಿದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ..

ಮಂಡ್ಯದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ
ಮಂಡ್ಯದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ

By

Published : Aug 25, 2021, 3:28 PM IST

ಮಂಡ್ಯ :ಮಂಡ್ಯ ಪರಿವರ್ತನೆಗೆ ನಾಂದಿ ಹಾಡಿರುವ ಜಿಲ್ಲೆ. ಇಲ್ಲಿಂದ ಪರಿವರ್ತನೆ ಗಾಳಿ ಬೀಸುವ ಕಾರ್ಯ ಆರಂಭ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬಿಜೆಪಿ ಪದಾಧಿಕಾರಿಗಳ ಸಭೆಯನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ವಿನೂತನವಾಗಿ ಚಾಲನೆ ನೀಡಿದರು. ಈ ಸಭೆಯಲ್ಲಿ ಬೆಲ್ಲದ ಅಚ್ಚುಗಳು ಪ್ರದರ್ಶನ ಮಾಡಿದರಲ್ಲದೇ, ನಳೀನ್ ಕುಮಾರ್ ಕಟೀಲ್, ದುಶ್ಯಂತ್ ಕುಮಾರ್ ಗೌತಮ್ ಪರಸ್ಪರ ಬೆಲ್ಲದ ಮಿಠಾಯಿ ತಿಂದು ಸಂಭ್ರಮಿಸಿದರು.

ಮಂಡ್ಯದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ

ಕುಟುಂಬ ರಾಜಕಾರಣಕ್ಕೆ ಅಂತ್ಯ :ಜಿಲ್ಲೆಯಲ್ಲಿ ಗೂಂಡಾಗಿರಿ, ಜಾತಿ, ಕುಟುಂಬ ರಾಜಕಾರಣವನ್ನ ನೋಡಿದ್ದೇವೆ. ಅದಕ್ಕೆಲ್ಲ ಅಂತ್ಯವಾಡಲು ಇಂದಿನ ಸಭೆಯಲ್ಲಿ ಸಂಕಲ್ಪವಾಗಲಿದೆ. ಭಾರತ ಅಭಿವೃದ್ಧಿ ಕಂಡು ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ ಎಂದರು.

ತಾಲಿಬಾನಿಗಳಿಗೆ ಮೋದಿ ತಕ್ಕ ಉತ್ತರ :ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲಿಗೆ, ತಾಲಿಬಾನರನ್ನ ಕರೆತರುತ್ತಿತ್ತು. ಮೋದಿ ಇರೋದ್ರಿಂದ ಅಫ್ಘನ್ ನಲ್ಲಿರುವ ಭಾರತೀಯರನ್ನ ಕರೆ ತಂದಿದ್ದಾರೆ. ಆ ಮೂಲಕ ತಾಲಿಬಾನಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು.

ಯಾರೇ ಅಕ್ರಮ‌ಗಣಿಗಾರಿಕೆ ಮಾಡಿದರೂ ಕಠಿಣ ಕ್ರಮ : ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ. ಯಾರೇ ಅಕ್ರಮ ಗಣಿಗಾರಿಕೆಯಲ್ಲಿದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದರು.

ಮೈಶುಗರ್ ಗೆ ಬಿಎಸ್‌ವೈ ಸಾಕಷ್ಟು ಅನುದಾನ ನೀಡಿದ್ದಾರೆ :ಬಿಎಸ್‌ವೈ ಇದ್ದಾಗ ಮೈಶುಗರ್ ಗೆ ಸಾಕಷ್ಟು ಅನುದಾನ ಕೊಟ್ಟಿದ್ದರು. ಮೈಶುಗರ್ ಕಾರ್ಯಾರಂಭಕ್ಕೆ ಎಲ್ಲಾ ರೀತಿಯ ನೆರವು ನೀಡಿದ್ದರು. ಮುಂದೆ ರೈತರಿಗೆ ಉಪಯೋಗವಾಗುವ ರೀತಿ ಮೈಶುಗರ್ ಆರಂಭವಾಗಲಿದೆ. ಮಂಡ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧ ಎಂದು ತಿಳಿಸಿದರು.

3 ಪಾಲಿಕೆಗಳಲ್ಲೂ ಬಿಜೆಪಿ ಗೆಲ್ಲುತ್ತೆ :ಇದೀಗ 3 ಪಾಲಿಕೆಗಳಿಗೆ ಚುನಾವಣೆ ಇದೆ. ಮೂರರಲ್ಲೂ ಬಿಜೆಪಿ ಗೆಲ್ಲುತ್ತೆ. ಆ ಮೂಲಕ ರಾಜ್ಯಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರೆಂಬ ಚರ್ಚೆ ನಡೆಯುತ್ತಿದೆ. ಆದ್ರೆ, ಮುಂದಿನ 20 ವರ್ಷ ಬಿಜೆಪಿ ಸರ್ಕಾರ ಇರುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಟೀಲ್ ಟಾಂಗ್ ನೀಡಿದರು. ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗಾದಿಗಾಗಿ ರೇಸ್ ಶುರುವಾಗಿದೆ. ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಒಂದೇ ದಾರಿಯಲ್ಲಿ ಹೋಗುತ್ತೇವೆ ಎಂದರು.

ಇದನ್ನೂ ಓದಿ : ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ

ABOUT THE AUTHOR

...view details