ಕರ್ನಾಟಕ

karnataka

ETV Bharat / state

ಮಂಡ್ಯ ಮಡಿವಾಳರ ಸಮಾವೇಶ : ವೋಟಿಗಾಗಿ ಜಾತಿ ಮೊರೆ ಹೋಯ್ತಾ ಬಿಜೆಪಿ...? - ಮಂಡ್ಯ ಬಿಜೆಪಿ ಸುದ್ದಿ

ಮಂಡ್ಯದ ಸಮುದಾಯ ಭವನದಲ್ಲಿ ಮಡಿವಾಳರ ಸಮಾವೇಶ ನಡೆಸುವುದರ ಮೂಲಕ ಬಿಜೆಪಿ ಮತಯಾಚನೆ ಮಾಡಿದರು.

ಮಂಡ್ಯ ಮಡಿವಾಳರ ಸಮಾವೇಶ
ಮಂಡ್ಯ ಮಡಿವಾಳರ ಸಮಾವೇಶ

By

Published : Nov 30, 2019, 4:43 AM IST

ಮಂಡ್ಯ: ಬಿಜೆಪಿ ಉಪಚುನಾವಣೆಯಲ್ಲಿ ದಾಳದ ಮೇಲೆ ದಾಳ ಉರುಳಿಸುತ್ತಿದೆ. ಮತ ಭೇಟೆಗಾಗಿ ಜಾತಿ ಸಮಾವೇಶ ನಡೆಸೋ ಮೂಲಕ ಪ್ರಚಾರವನ್ನು ಚುರುಕುಗೊಳಿಸಿದೆ. ನಗರದ ಸಮುದಾಯ ಭವನದಲ್ಲಿ ಮಡಿವಾಳರ ಸಮಾವೇಶ ನಡೆಸಿ ಮತಯಾಚನೆ ಮಾಡಲಾಯಿತು.

ಮಂಡ್ಯ ಮಡಿವಾಳರ ಸಮಾವೇಶ

ಸಿಎಂ ಪುತ್ರ ವಿಜಯೇಂದ್ರ, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸೇರಿದಂತೆ ಹಲವು ಮುಖಂಡರು ಮಡಿವಾಳರ ಸಮಾವೇಶ ನಡೆಸಿ ಪ್ರಚಾರ ಮಾಡಿದರು. ಕಳೆದ ಬಾರಿ ಯಡಿಯೂರಪ್ಪ ಕ್ಷೇತ್ರಕ್ಕೆ ನೀಡಿದ ಅನುದಾನದ ವಿವರಣೆ ನೀಡಿ. ಈಗಲೂ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಎಲ್ಲಾ ಮುಖಂಡರು ಮನವಿ ಮಾಡಿದರು.

ನಾರಾಯಣಗೌಡ ಪರ ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ದಲಿತರ ಸಮಾವೇಶ ಮಾಡಿ ಪ್ರಚಾರ ಮಾಡಲಾಗಿತ್ತು. ಇಂದು ಸಹ ಮತ್ತೊಂದು ಸಮುದಾಯದ ಸಮಾವೇಶ ನಡೆಯಲಿದೆ ಎಂದು ಹೇಳಲಾಗಿದೆ.

ABOUT THE AUTHOR

...view details