ಮಂಡ್ಯ: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸೀರೆ ಹಂಚುತ್ತಿದ್ದಾರೆ ಎಂದು ಜೆಡಿಎಸ್ ಸಮಾವೇಶದಲ್ಲಿ ಸೀರೆ ಪ್ರದರ್ಶಿಸಿ ಕಾರ್ಯಕರ್ತರು, ಮತದಾರರು ಜಾಗೃತಿ ವಹಿಸುವಂತೆ ಕಾರ್ಯಕರ್ತ ಬ್ಯಾಲದಕೆರೆ ನಂಜಪ್ಪ ಮನವಿ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿತರಿಸಿದ್ದಾರೆ ಎನ್ನಲಾದ ಸೀರೆಗಳನ್ನು ಪ್ರದರ್ಶಿಸಿದ ಬ್ಯಾಲದಕೆರೆ ನಂಜಪ್ಪ, ಈ ಸೀರೆ ನಾರಾಯಣಗೌಡ ಕೊಟ್ಟಿದ್ದಾರೆ. ಅವರ ಆಮಿಷಗಳಿಗೆ ಯಾರೂ ಮರಳಾಗಬೇಡಿ ಎಂದು ಕೇಳಿಕೊಂಡರು.
ಜೆಡಿಎಸ್ ಶಾಸಕ ಸುರೇಶ್ಗೌಡ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪರಿಸ್ಥಿತಿ ರಾಜ್ಯದ ಬಿಜೆಪಿಗೂ ಬರಲಿದೆ. ಬಿ.ಎಸ್.ಯಡಿಯೂರಪ್ಪ 4 ತಿಂಗಳ ಸಿಎಂ ಆಗ್ತಾರೆ. ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡ್ತಾರೆ ಎಂದು ಜೆಡಿಎಸ್ ಶಾಸಕ ಸುರೇಶ್ಗೌಡ ಭವಿಷ್ಯ ನುಡಿದರು.
ಚಲುವರಾಯಸ್ವಾಮಿ ರಾಜಕೀಯ ವ್ಯಬಿಚಾರಿ. ವ್ಯಬಿಚಾರಿ ಎಂದರೆ ತಲುಹಿಡುಕ ಎಂದು ಅರ್ಥೈಸಿದ ಸುರೇಶ್ ಗೌಡ ಮತದಾರರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಮೊಬೈಲ್ ಭಾಷಣ ಮಾಡಿದ ಮಾಜಿ ಸಿಎಂ: ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಸಿಎಂ ಕುಮಾರಸ್ವಾಮಿ ಮೊಬೈಲ್ ಮೂಲಕವೇ ಸಂದೇಶ ನೀಡಿದರು. ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.