ಕರ್ನಾಟಕ

karnataka

ETV Bharat / state

ಶುಭ ಗಳಿಗೆ ಮಿಸ್​​​​ ಆಗುವ ಆತಂಕ... ಮೆರವಣಿಗೆ ಬಿಟ್ಟು ಓಡಿದ ಬಿಜೆಪಿ ಅಭ್ಯರ್ಥಿ! - ನಾಮಪತ್ರ ಸಲ್ಲಿಸಲು ಓಡಿದ ನಾರಾಯಣಗೌಡ

ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಶುಭ ಗಳಿಗೆ ಮುಗಿಯುತ್ತದೆ ಎಂಬ ಆತಂಕದಲ್ಲಿ ನಾಮಪತ್ರ ಸಲ್ಲಿಸಲು ಓಡೋಡಿ ಹೋಗಿದ್ದಾರೆ.

ಮೆರವಣಿಗೆ ಬಿಟ್ಟು ಓಡಿದ ಬಿಜೆಪಿ ಅಭ್ಯರ್ಥಿ

By

Published : Nov 18, 2019, 2:27 PM IST

ಮಂಡ್ಯ: ಕೆ.ಆರ್​.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಶುಭ ಗಳಿಗೆ ಮುಗಿಯುತ್ತದೆ ಎಂಬ ಆತಂಕದಲ್ಲಿ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಓಡೋಡಿ ಬಂದಿದ್ದಾರೆ.

ಮೆರವಣಿಗೆ ಬಿಟ್ಟು ಓಡಿದ ಬಿಜೆಪಿ ಅಭ್ಯರ್ಥಿ

ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮುಂದಾಗಿದ್ದರು. ಆದರೆ ಶುಭ ಗಳಿಗೆ ಮೀರಿ ಹೋಗುವ ಆತಂಕದಲ್ಲಿ ರಸ್ತೆಯುದ್ದಕ್ಕೂ ಜನರತ್ತ ಕೈ ಬೀಸಿ ಓಡೋಡಿ ತಹಸೀಲ್ದಾರ್ ಕಚೇರಿ ತಲುಪಿದ್ದಾರೆ.

ಇದಕ್ಕೂ ಮೊದಲು ನಾರಾಯಣಗೌಡ ಅವರು ಮೆರವಣಿಗೆ ಸ್ಥಳಕ್ಕೆ ಕಾರಿನಲ್ಲಿ ತೆರಳುವಾಗ ದಾರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ ಎದುರಾಗಿದೆ. ಈ ವೇಳೆ ಜೆಡಿಎಸ್​ ಕಾರ್ಯಕರ್ತರು ನಾರಾಯಣಗೌಡ ಅವರನ್ನ ಕಂಡು ಕೆರಳಿದ್ದಾರೆ. ಸ್ಥಳದಲ್ಲೇ ಇದ್ದ ಪೊಲೀಸರು ಕಾರ್ಯಕರ್ತರನ್ನ ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಬೃಹತ್ ಮೆರವಣಿಗೆ:
ಇತ್ತ ಜೆಡಿಸ್​ ಅಭ್ಯರ್ಥಿ ಬಿ.ಎಲ್.ದೇವರಾಜು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದಾರೆ. ಮೆರವಣಿಗೆಯಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಪಾಲ್ಗೊಂಡಿದ್ದರು. ಮೆರವಣಿಗೆ ವೇಳೆ ಕೆ.ಆರ್.ಪೇಟೆಯ ಹೊಸಹೊಳಲು ವೃತ್ತದ ಬಳಿ ಮಾಜಿ ಸಚಿವ ಪುಟ್ಟರಾಜು ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದಾರೆ.

ABOUT THE AUTHOR

...view details