ಮಂಡ್ಯ:ಉಪಚುನಾವಣೆ ಸಂದರ್ಭದಲ್ಲಿ 6 ಫೋಟೋಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ. ಆ ಫೋಟೋಗಳು ಜೆಡಿಎಸ್ ವಲಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾದರೆ, ಜೆಡಿಎಸ್ ಅಭ್ಯರ್ಥಿಗೆ ಆತಂಕ ಸೃಷ್ಟಿ ಮಾಡಿವೆ ಎಂದು ಹೇಳಲಾಗ್ತಿದೆ.
ಆ ಆರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆ ಫೋಟೋ ಬೇರೆ ಯಾವುದೂ ಅಲ್ಲ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿ ರಾಮ್, ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಮೋಹನ್ ಭೇಟಿ ಮಾಡಿರುವ ಫೋಟೋಗಳು.