ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತದಲ್ಲಿ ಸವಾರ ಸಾವು: ಹೆಲ್ಮೆಟ್‌ ಧರಿಸುತ್ತಿದ್ದರೆ ಪ್ರಾಣ ಉಳಿಯುತ್ತಿತ್ತು! - ಇತ್ತೀಚಿನ ಮಂಡ್ಯದ ಸುದ್ದಿ

ಬೈಕ್​ಗೆ ಅಡ್ಡ ಬಂದ ವ್ಯಕ್ತಿಯನ್ನು ಅಪಘಾತದಿಂದ ತಪ್ಪಿಸಲು ಹೋಗಿ ಸವಾರನ ತಲೆಗೆ ಕಲ್ಲು ಬಡಿದು ಸಾವಿಗೀಡಾದ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಶೆಟ್ಟಹಳ್ಳಿ ಬಳಿ ನಡೆದಿದೆ.

ಹೆಲ್ಮೆಟ್‌ ಇರುತ್ತಿದ್ದರೆ ಪ್ರಾಣ ಉಳಿಯುತ್ತಿತ್ತು!

By

Published : Sep 21, 2019, 4:36 PM IST

ಮಂಡ್ಯ: ಬೈಕ್​ಗೆ ಅಡ್ಡ ಬಂದ ವ್ಯಕ್ತಿಯನ್ನು ಅಪಘಾತದಿಂದ ತಪ್ಪಿಸಲು ಹೋಗಿ ಕೆಳಗೆ ಬಿದ್ದು ಸವಾರನ ತಲೆಗೆ ಕಲ್ಲು ಬಡಿದು ಸಾವಿಗೀಡಾದ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಶೆಟ್ಟಹಳ್ಳಿ ಬಳಿ ನಡೆದಿದೆ.

ಚಿನಕುರಳಿ ಗ್ರಾಮದ ಭರತ್ (20) ಸಾವಿಗೀಡಾದ ಬೈಕ್ ಸವಾರ.

ದೇವಸ್ಥಾನದಲ್ಲಿ ಪೂಜೆ ಮುಗಿಸಿ ಗ್ರಾಮಕ್ಕೆ ವಾಪಸಾಗುವಾಗ ದುರ್ಘಟನೆ ನಡೆದಿದೆ. ಸಂಚಾರದ ವೇಳೆ ರಸ್ತೆಯಲ್ಲಿ ವ್ಯಕ್ತಿಯೋರ್ವ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಪ್ರಯತ್ನಿಸಿ ಬೈಕ್​ನಿಂದ ಕೆಳಗೆ ಆಯ ತಪ್ಪಿ ಬಿದ್ದಿದ್ದಾನೆ. ಈ ಸಂದರ್ಭ ರಸ್ತೆ ಬದಿಯ ಕಲ್ಲು ತಲೆಗೆ ಬಡಿದು ತೀವ್ರವಾಗಿ ರಕ್ತಸ್ರಾವವಾದ ಪರಿಣಾಮ ಆತ ಮೃತಪಟ್ಟಿದ್ದಾನೆ.

ತಲೆಗೆ ಹೆಲ್ಮೆಟ್ ಧರಿಸಿದ್ದರೆ ಭರತ್ ಸಾವಿನಿಂದ ಪಾರಾಗುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಕೆ.ಆರ್.ಎಸ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details