ಕರ್ನಾಟಕ

karnataka

ETV Bharat / state

ಮದ್ದೂರಿಗೆ ಭಾಸ್ಕರ್ ರಾವ್ ಭೇಟಿ... 20 ವರ್ಷ ಹಿಂದಿನ ಸಹೋದ್ಯೋಗಿ ಕಂಡು ಖುಷ್​ - ಸಹೋದ್ಯೋಗಿ ಕಂಡು ಖುಷಿಯಾದ ಭಾಸ್ಕರ್​ ರಾವ್​

ಒಂದು ಕಾಲು ರೂಪಾಯಿ ಹರಿಕೆಗೆ ಪ್ರಸಿದ್ಧಿಯಾಗಿರುವ ಮದ್ದೂರಿನ ಹೊಳೆ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರನ್ನು ದೇವಾಲಯದ ವತಿಯಿಂದ ಸ್ವಾಗತಿಸಿ ಸನ್ಮಾನಿಲಾಯಿತು. ಈ ವೇಳೆ ಅವರು 20 ವರ್ಷಗಳ ಹಿಂದಿನ ಸಹೋದ್ಯೋಗಿ ಒಬ್ಬರನ್ನು ಕಂಡು ಖುಷಿಯಾದರು. ಅಲ್ಲದೆ ಆತ್ಮೀಯತೆಯಿಂದ ಮಾತನಾಡಿಸಿದರು.

ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಾಸ್ಕರ್ ರಾವ್
ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಾಸ್ಕರ್ ರಾವ್

By

Published : Jun 14, 2020, 12:18 PM IST

ಮಂಡ್ಯ: ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮದ್ದೂರಿನ ಹೊಳೆ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಾಸ್ಕರ್ ರಾವ್

ಒಂದು ಕಾಲು ರೂಪಾಯಿ ಹರಿಕೆಗೆ ಪ್ರಸಿದ್ಧಿಯಾಗಿರುವ ಮದ್ದೂರಿನ ಹೊಳೆ ಆಂಜನೇಯ ದೇವಾಲಯಕ್ಕೆ ಆಗಮಿಸಿದ್ದ ಅವರಿಗೆ ದೇವಾಲಯದ ವತಿಯಿಂದ ಸ್ವಾಗತಿಸಿ, ಸನ್ಮಾನ ಮಾಡಲಾಯಿತು.

ಓದಿ:ಹುಚ್ಚ ವೆಂಕಟ್ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಪತ್ತೆಗೆ ಖಾಕಿ ತಲಾಶ್​​​

ಹೃದಯ ವೈಶಾಲ್ಯತೆ: ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಉನ್ನತ ಹುದ್ದೆಯಲ್ಲಿದ್ದರೂ ತಮ್ಮನ್ನು ಭೇಟಿ ಮಾಡಿದ ಹಳೇಯ ಸಹದ್ಯೋಗಿ ಸ್ನೇಹಿತನ ಜೊತೆ ಆತ್ಮೀಯತೆ ಮಾತುಕತೆ ನಡೆಸಿದರು. 20 ವರ್ಷದ ಹಿಂದಿನ ಸಹದ್ಯೋಗಿ‌ ಪೊಲೀಸ್​ ಕಾನ್ಸ್​ಟೆಬಲ್​ ಒಬ್ಬರನ್ನು ಕಂಡು ಆತ್ಮೀಯವಾಗಿ ಮಾತನಾಡಿಸಿ ಔದಾರ್ಯತೆ ಮೆರೆದರು.

ಮಂಡ್ಯದಲ್ಲಿ ಪ್ರೊಬೆಷನರಿಯಾಗಿ ಬಂದಿದ್ದ ಭಾಸ್ಕರ್ ರಾವ್ ಜೊತೆ ಕಾನ್ಸ್​ಟೆಬಲ್​ ಕೆಲಸ ಮಾಡಿದ್ದ ಚಿಕ್ಕಣ್ಣರನ್ನು ಕಂಡು ಕುಶಲೋಪರಿ ವಿಚಾರಿಸಿದರು‌.

ABOUT THE AUTHOR

...view details