ಮಂಡ್ಯ:ರಾಜಕೀಯ ವೈಷಮ್ಯಕ್ಕೆ ಬಾಳೆ ತೋಟ ನಾಶ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ನಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಹಳೆ ವೈಷಮ್ಯಕ್ಕೆ ಬಲಿಯಾಯ್ತು ಬಾಳೆ, ನಾಶವಾಯ್ತು ಲಕ್ಷಾಂತರ ರೂ ಬೆಳೆ! - undefined
ರಾಜಕೀಯ ವೈಷಮ್ಯಕ್ಕೆ ಬಾಳೆ ತೋಟ ನಾಶ ಮಾಡಿದ ಘಟನೆ ಪಾಂಡವಪುರ ತಾಲೂಕಿನ ನಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾಳೆ ತೋಟ ನಾಶ
ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಗ್ರಾಮದ ಪುಟ್ಟೇಗೌಡ ಎಂಬವರ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಮಾಲೀಕರ ಕಣ್ಣೆದುರೇ ಗಿಡಗಳನ್ನ ನಾಶ ಮಾಡಿ ಹೋಗಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಜಮೀನು ಮಾಲೀಕ ಆರೋಪಿಸಿದ್ದಾರೆ.
ಬಾಳೆ ತೋಟ ನಾಶ
ಪೊಲೀಸರು ಘಟನಾಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಬಾಳೆ ಬೆಳೆ ಕಳೆದುಕೊಂಡ ಪುಟ್ಟೇಗೌಡ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.