ಮಂಡ್ಯ:ಜಿಲ್ಲೆಯಲ್ಲಿ ಎರಡು ದಿನಗಳಿಂದ ಬ್ರಹ್ಮಚಾರಿಗಳ ಪಾದಯಾತ್ರೆ ಪೋಸ್ಟರ್ ಸದ್ದು ಮಾಡುತ್ತಿದೆ. 'ಬ್ರಹ್ಮಚಾರಿಗಳ ನಡೆ, ಮಹದೇಶ್ವರ ಬೆಟ್ಟದ ಕಡೆ' ಎಂಬ ಹೆಸರಿನಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ. ಇದಕ್ಕೆ ವಿಧಿಸಿರುವ ಷರತ್ತುಗಳು ಜನರಲ್ಲಿ ಅಚ್ಚರಿ ಉಂಟುಮಾಡಿದೆ.
ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಿಂದ ಮಲೆಮಹದೇಶ್ವರ ಬೆಟ್ಟಕ್ಕೆ 122 ಕಿ.ಮೀ ಪಾದಯಾತ್ರೆ ಮಾಡುವುದಾಗಿ ಈ ಪೋಸ್ಟರ್‌ನಲ್ಲಿ ಹೇಳಲಾಗಿದೆ. ಮಳವಳ್ಳಿ-ಕೊಳ್ಳೆಗಾಲ-ಹನೂರು ಮಾರ್ಗವಾಗಿ ಪ್ರಯಾಣ ಸಾಗಲಿದೆ.
ಷರತ್ತುಗಳೇನು?:ಬ್ರಹ್ಮಚಾರಿಗಳ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆಕಡ್ಡಾಯವಾಗಿ 30 ವರ್ಷ(ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವಂತೆ) ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ. ಮದುವೆ ನಿಶ್ಚಿತಾರ್ಥ ಆಗಿದ್ದವರಿಗೂ ನಿಷೇಧ ಇದೆ ಎಂದು ಸೂಚನೆ ಕೊಟ್ಟಿದ್ದಾರೆ.
ಇದಲ್ಲದೆ ಪ್ರತಿ 5 ಕಿ.ಮೀಗೆ ಚಹಾ ವಿರಾಮ ಹಾಗೂ ಪ್ರತಿ 10 ಕಿ.ಮೀಗೆ ಸ್ನ್ಯಾಕ್ಸ್ ವ್ಯವಸ್ಥೆ ಇರಲಿದೆ. ಪಾದಯಾತ್ರೆ ಹೊರಡುವ ದಿನಾಂಕ ಮತ್ತು ರೂಪುರೇಷೆಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿಯೂ ತಿಳಿಸಲಾಗಿದೆ. ಆದರೆ, ಈ ಪೋಸ್ಟರ್‌ನಲ್ಲಿ ಆಯೋಜಕರ ಮಾಹಿತಿ ಆಗಲಿ ಅಥವಾ ದೂರವಾಣಿ ಸಂಖ್ಯೆಯಾಗಲಿ ಇಲ್ಲ!.
ಇದನ್ನೂ ಓದಿ:ಚಾಮರಾಜನಗರದಲ್ಲಿ ಹುಟ್ಟುಹಬ್ಬದಂದೇ ಉಪನ್ಯಾಸಕಿ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಹೀಗಿತ್ತು ವಿಚಾರ!