ಮಂಡ್ಯ:ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ. ಪಾಂಡವಪುರ ತಾಲೂಕು ವ್ಯಾಪ್ತಿಯ ಬೇಬಿ ಬೆಟ್ಟ ಬೆಟ್ಟದ 1,600 ಎಕರೆ ಪ್ರದೇಶ ರಾಜಮನೆತಕ್ಕೆ ಸೇರಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಬಾರದು ಎಂದು ಪತ್ರ ಬರೆದಿದ್ದಾರೆ.
ಪ್ರಮೋದಾ ದೇವಿ ಒಡೆಯರ್ ಪರ ವಕೀಲ ನರೇಂದ್ರ ಡಿ ವಿ ಗೌಡ ಅವರು ಇಂದು ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು. ಈ ಬಗ್ಗೆ ಜುಲೈ 22ರಂದು ಪ್ರಮೋದಾ ದೇವಿ ಅವರು ಟ್ರಯಲ್ ಬ್ಲಾಸ್ಟ್ ನಡೆಸದಂತೆ ಇ ಮೇಲ್ ಮಾಡಿದ್ದರು. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪತ್ರದ ಮೂಲಕ ಆಕ್ಷೇಪಣೆ ಮಾಡಿದ್ದಾರೆ.