ಮಂಡ್ಯ:ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವ ಕೊಲೆಯಾಗಿರುವ ಘಟನೆ ಮಳವಳ್ಳಿ ಟೌನ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಳವಳ್ಳಿ ಪಟ್ಟಣದ ಸುಣ್ಣದಕೇರಿಯಲ್ಲಿ ಘಟನೆ ನಡೆದಿದ್ದು, ಶ್ರೀನಿವಾಸ್ (46) ಎಂಬ ಆಟೋ ಚಾಲಕನ ಮೈಮೇಲೆ ದುಷ್ಕರ್ಮಿಗಳು ಆ್ಯಸಿಡ್ ಸುರಿದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮಹಿಳೆಯೊಂದಿನ ವಿವಾಹೇತರ ಸಂಬಂಧವೇ ಆಟೋ ಚಾಲಕನ ಕೊಲೆಗೆ ಕಾರಣವೆಂದು ಹೇಳಲಾಗ್ತಿದೆ.