ಮಂಡ್ಯ :ಆಟೋ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಜಮೀನಿನ ಪಕ್ಕ ಬಿಸಾಡಿ ಹೋಗಿರುವ ಘಟನೆ ಸಮೀಪದ ಸಾತನೂರು ಬಳಿ ನಡೆದಿದೆ.
ಆಟೋ ಚಾಲಕನ ಬರ್ಬರ ಹತ್ಯೆ: ಹಬ್ಬದಲ್ಲಿ ಆತಂಕಗೊಂಡ ಜನತೆ - ಆಟೋ ಚಾಲಕ
ಸಾತನೂರು ಬಳಿ ಆಟೋ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಆಟೋ ಚಾಲಕನ ಬರ್ಬರ ಹತ್ಯೆ: ಹಬ್ಬದಲ್ಲಿ ಆತಂಕಗೊಂಡ ಜನತೆ
ಮಂಡ್ಯದ ಕೆರೆ ಅಂಗಳದ ನಿವಾಸಿ ಸಾಧಿಪ್ ಪಾಷಾ(32) ಎಂಬಾತನನ್ನು ಕೊಲೆ ಮಾಡಲಾಗಿದ್ದು, ಹಳೇ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಕಳೆದ ರಾತ್ರಿ ಕೊಲೆ ಮಾಡಿ ಜಮೀನಿನ ಬಳಿ ಬಿಸಾಡಿ ಹೋಗಲಾಗಿದೆ.
ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.