ಕರ್ನಾಟಕ

karnataka

ETV Bharat / state

ಮಂಡ್ಯ : ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್​! - ಶಿವರಾಮೇಗೌಡ ಭ್ರಷ್ಟಾಚಾರ

ನನ್ನದು‌ 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ‌ ರೂ. ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟು ಹಣ ಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿರುವ ಆಡಿಯೋ ಇದಾಗಿದೆ..

Former MP L R Shivaramegowda
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

By

Published : Jan 30, 2022, 12:43 PM IST

Updated : Jan 30, 2022, 1:01 PM IST

ಮಂಡ್ಯ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ಒಂದು ಈಗ ಜಿಲ್ಲೆಯಲ್ಲಿ ವೈರಲ್ ಆಗಿದೆ. ಎಲ್.ಆರ್.ಶಿವರಾಮೇಗೌಡ ಅವರು ಜೆಡಿಎಸ್ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ.

ಎಂಎಲ್​​ಸಿ ಚುನಾವಣೆಗೆ 27 ಕೋಟಿ‌ ರೂ. ಖರ್ಚು ಮಾಡಿದ್ದೆ. ಐದು ತಿಂಗಳಿಗೆ ಎಂಪಿ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡುತ್ತೇನೆ ಎಂದು ಹೇಳಿರುವ 37‌ ನಿಮಿಷ 54 ಸೆಂಕೆಡ್​​ನ ಆಡಿಯೋ ವೈರಲ್ ಆಗಿದೆ.

ನನ್ನದು‌ 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ‌ ರೂ. ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟು ಹಣ ಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿರುವ ಆಡಿಯೋ ಇದಾಗಿದೆ.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರದ್ದು ಎನ್ನಲಾದ ವೈರಲ್​ ಆಡಿಯೋ

ಕಳೆದ ಮೂರು ದಿನಗಳ ಹಿಂದೆಯಷ್ಟೇ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಎಲ್.ಆರ್.ಶಿವರಾಮೇಗೌಡ ಭೇಟಿ ನೀಡಿದ್ದರು. ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎನ್ನಲಾಗಿರುವ ಆಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕಾರವಾರ : ನೌಕಾನೆಲೆಯಲ್ಲಿ ಹೊರ ರಾಜ್ಯದವರಿಗೆ ಉದ್ಯೋಗ-ಭೂಮಿ ಕೊಟ್ಟವರಿಗೆ ಭರವಸೆ ಹುಸಿ?

ಸದ್ಯ ನಾಗಮಂಗಲ ಜೆ.ಡಿ‌.ಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡ, ನಾಗಮಂಗಲದ ಜೆ.ಡಿ.ಎಸ್ ಶಾಸಕರ ವಿರುದ್ಧವೂ ಆಡಿಯೋದಲ್ಲಿ ಚರ್ಚೆ ನಡೆಸಿದ್ದಾರೆ.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರದ್ದು ಎನ್ನಲಾದ ವೈರಲ್​ ಆಡಿಯೋ

ನಾನು ಎರಡು ಸಲ ಎಂ.ಎಲ್.ಎ ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡಬಹುದು. ಸುರೇಶ್ ಗೌಡ ನನಗೆ ಕಳೆದ ಲೋಕಸಭಾ ಟಿಕೆಟ್ ತಪ್ಪಿಸಿದ. ನಿಖಿಲ್ ಕುಮಾರ್ ಸ್ವಾಮಿಯನ್ನು ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದ್ರು, ನನಗೂ ಕಂಟಕ ತಂದ್ರು. ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ. ನನಗೆ ಬೆಂಬಲ‌ಕೊಡಿ ಎಂದು ಆಡಿಯೋ ಕೇಳಿಕೊಂಡಿದ್ದಾರೆ. ಇದೇ ಆಡಿಯೋದಲ್ಲಿ‌ ಮಾಜಿ ಸಂಸದ ಜಿ.ಮಾದೇಗೌಡರ ಬಗ್ಗೆಯೂ ಚರ್ಚೆ ನಡೆದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 30, 2022, 1:01 PM IST

ABOUT THE AUTHOR

...view details