ಮಂಡ್ಯ: ಎಟಿಎಂ ಮಷಿನ್ ದರೋಡೆಗೆ ಯತ್ನಿಸಿರುವ ಘಟನೆ ಶ್ರೀರಂಗಪಟ್ಟಣದ ಕೆಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತಡರಾತ್ರಿ ನಡೆದಿದೆ.
ಎಟಿಎಂ ದರೋಡೆಗೆ ಯತ್ನ : ಅಲಾರಂ ಸದ್ದು ಕೇಳಿ ಖದೀಮರು ಪರಾರಿ - ಮಂಡ್ಯ ಎಟಿಎಂ ದರೋಡೆಗೆ ಯತ್ನ
ಬಸ್ ನಿಲ್ದಾಣದಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಸೆಕ್ಯೂರಿಟಿ ಗಾರ್ಡ್ ಇಲ್ಲ. ಇದನ್ನು ಗಮನಿಸಿದ್ದ ಕಳ್ಳರು ಎಟಿಎಂ ದರೋಡೆಗೆ ಯತ್ನಿಸಿದ್ದಾರೆ.
ಎಟಿಎಂ ದರೋಡೆಗೆ ಯತ್ನ
ಬಸ್ ನಿಲ್ದಾಣದಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಸೆಕ್ಯೂರಿಟಿ ಗಾರ್ಡ್ ಇಲ್ಲ. ಇದನ್ನು ಗಮನಿಸಿದ್ದ ಕಳ್ಳರು ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಎಟಿಎಂ ಯಂತ್ರ ಮುರಿದು ದರೋಡೆಗೆ ಯತ್ನಿಸುತ್ತಿದ್ದಾಗ ಎಟಿಎಂ ಅಲಾರಂ ಮೊಳಗಿದೆ, ಈ ವೇಳೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.