ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ವಸತಿ ಶಾಲೆಗೆ ದಾಳಿ: ಶಿಕ್ಷಕರ ನಾಪತ್ತೆಗೆ ಜಿಪಂ, ತಾಪಂ ಸದಸ್ಯರು ಗರಂ - Attack

ವಸತಿ ಶಾಲೆಯಲ್ಲಿ ವಾಸ್ತವ್ಯ ಮಾಡದ ಶಿಕ್ಷಕರ ನಡೆಗೆ ಜನಪ್ರತಿನಿಧಿಗಳು ಗರಂ ಆಗಿದ್ದಾರೆ. ಶಾಲೆಯಲ್ಲಿ ವಾಸ್ತವ್ಯ ಮಾಡಬೇಕು ಎಂಬ ಆದೇಶವಿದ್ದರೂ ಶಾಲಾ ಶಿಕ್ಷಕರು ನಾಪತ್ತೆಯಾಗುವ ಮೂಲಕ ಆದೇಶವನ್ನು ಗಾಳಿಗೆ ತೂರಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ದಾಳಿ ಮಾಡಿ ಅಧಿಕಾರಿಗಳು ಚಾಟಿ ಬೀಸಿದರು.

ವಸತಿ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾ ಪಂಚಾಯತ್ ಸದಸ್ಯರು

By

Published : Jun 20, 2019, 10:20 AM IST

ಮಂಡ್ಯ:ರಾತ್ರೋರಾತ್ರಿ ವಸತಿ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾ ಪಂಚಾಯತ್ ಸದಸ್ಯರು, ಅಲ್ಲಿನ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರಿನ ಮೊರಾರ್ಜಿ‌ ವಸತಿ ಶಾಲೆಯಲ್ಲಿ ನಡೆದಿದೆ.‌

ಶಾಲೆಯಲ್ಲಿ ಶಿಕ್ಷಕರು ವಾಸ್ತವ್ಯ ಮಾಡದ ಹಿನ್ನೆಲೆ ಈ ಬಗ್ಗೆ ದೂರು ಕೇಳಿ ಬರುಯತ್ತಿದ್ದಂತೆ ತಡರಾತ್ರಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ, ತಾಪಂ ಅಧ್ಯಕ್ಷೆ, ತಹಶೀಲ್ದಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಶಿಕ್ಷಕರಿಗೆ ಚಾಟಿ ಬೀಸಿದರು.

ವಸತಿ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾ ಪಂಚಾಯತ್ ಸದಸ್ಯರು

ದಾಳಿ ವೇಳೆ ವಸತಿ ಶಾಲೆಯ ಪ್ರಿನ್ಸಿಪಾಲ್​ ಸೇರಿ ಹಲವು ಶಿಕ್ಷಕರು ವಸತಿ ಶಾಲೆಯಲ್ಲಿ ವಾಸ್ತವ್ಯ ಇರದೇ ನಾಪತ್ತೆಯಾಗಿದ್ದರು. ಶಾಲೆಯ ಮಕ್ಕಳಿಂದ ಶಿಕ್ಷಕರ ಬಗ್ಗೆ ಮಾಹಿತಿ ಪಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಕ್ರಮಕ್ಕೆ ಸರ್ಕಾರದ ಗಮನಕ್ಕೆ ತರಲು ಮುಂದಾಗಿದ್ದಾರೆ.

ABOUT THE AUTHOR

...view details