ಕರ್ನಾಟಕ

karnataka

ETV Bharat / state

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಗರಗಸದಿಂದ ಅಪ್ಪ-ಮಗನ ಮೇಲೆ ಹಲ್ಲೆಗೆ ಯತ್ನ - ತಂದೆ-ಮಗನನ ಮೇಲೆ ಹಲ್ಲೆಗೆ ಯತ್ನ

ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ಮೇಲೆ ಗರಗಸದಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಅದೇ ಗ್ರಾಮದ ಮೂವರು ತಂದೆ ಹಾಗೂ ಮಗನ ಮೇಲೆ ಹಲ್ಲೆಗೆ ಯತ್ನಿಸಿದ್ದು ಮೂವರ ವಿರುದ್ಧವೂ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಮುಖ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರದಿಂದ ಅಪ್ಪ-ಮಗನ ಮೇಲೆ ಹಲ್ಲೆ

By

Published : Mar 26, 2020, 10:17 AM IST

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಗರಗಸದಿಂದ ತಂದೆ ಮತ್ತು ಮಗನ ಹತ್ಯೆಗೆ ಯತ್ನಿಸಿದ ಘಟನೆ ಮದ್ದೂರು ತಾಲೂಕಿನ ಬಿದರಕೋಟೆ ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಗರಗಸದಿಂದ ಅಪ್ಪ-ಮಗನ ಮೇಲೆ ಹಲ್ಲೆ

ತಂದೆ ವಿಷಕಂಠಪ್ಪ, ಮಗ ಅರುಣ್ ಮೇಲೆ‌ ಅದೇ ಗ್ರಾಮದ ಕೃಷ್ಣ ಎಂಬಾತ ಹಲ್ಲೆಗೆ ಮುಂದಾಗಿದ್ದ. ಘಟನೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೃಷ್ಣ, ಸಿದ್ದಲಿಂಗಸ್ವಾಮಿ, ಪ್ರಸನ್ನ ಎಂಬುವವರ ವಿರುದ್ಧ ದೂರು ದಾಖಲಾಗಿದ್ದು, ಘಟನೆ ಬಳಿಕ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ‌ ಮುಂದುವರಿದಿದೆ.

ABOUT THE AUTHOR

...view details