ಕರ್ನಾಟಕ

karnataka

ETV Bharat / state

ಬುದ್ಧಿ ಹೇಳಿದ್ದಕ್ಕೆ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ: ದೂರು ದಾಖಲು - Complaint filed on manjegowda family

ಮಂಜೇಗೌಡ ಮತ್ತು ಕುಟುಂಬ ಕ್ವಾರಂಟೈನ್ ಅವಧಿ ಮುಗಿಸಿ ಗ್ರಾಮಕ್ಕೆ ಆಗಮಿಸಿದ್ದರು. ಈ ಸಂದರ್ಭ ಅವರ ಮನೆಗೆ ಆಶಾ ಕಾರ್ಯಕರ್ತೆ ಆಗಮಿಸಿ, ಸಲಹೆ ನೀಡಿದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ
ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ

By

Published : May 29, 2020, 9:40 PM IST

ಮಂಡ್ಯ: ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಘಟನೆ, ಕೆ.ಆರ್. ಪೇಟೆ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬುದ್ಧಿ ಹೇಳಿದಕ್ಕೆ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ

ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆ ಶೋಭಾ ಎಂಬುವವರ ಮೇಲೆ ಕೊಡಗಹಳ್ಳಿ ಗ್ರಾಮದ ಮಂಜೇಗೌಡ, ರುದ್ರೇಶ್, ನಿಖಿಲ್, ಪ್ರಿಯಾಂಕ ಮತ್ತು ಗೀತಾ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಮಂಜೇಗೌಡ ಮತ್ತು ಕುಟುಂಬ ಕ್ವಾರಂಟೈನ್ ಅವಧಿ ಮುಗಿಸಿ ಗ್ರಾಮಕ್ಕೆ ಆಗಮಿಸಿದ್ದರು. ಈ ಸಂದರ್ಭ ಅವರ ಮನೆಗೆ ಆಶಾ ಕಾರ್ಯಕರ್ತೆ ಆಗಮಿಸಿ ಸೂಚನೆ ನೀಡುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.

ABOUT THE AUTHOR

...view details