ಮಂಡ್ಯ:ಜನರಿಂದ ಎಟಿಎಂ ಕಾರ್ಡ್ ಎಗರಿಸಿ ಹಣ ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಾಗಸಂದ್ರದ ನಿವಾಸಿ ಸಿದ್ದಪ್ಪ ಮುನಿಯಪ್ಪನವರ್ ಬಂಧಿತ ಆರೋಪಿ, ಈತನಿಂದ 90 ಸಾವಿರ ನಗದು, 1 ಬೈಕ್ ಹಾಗೂ 5 ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.
ಎಟಿಎಂ ಕಾರ್ಡ್ ಕದ್ದು ಐಶಾರಾಮಿ ಜೀವನ : ಪೊಲೀಸರ ಅತಿಥಿಯಾದ ಖತರ್ನಾಕ್ ಕಳ್ಳ - ಮಂಡ್ಯ ಸುದ್ದಿ
ಜನರಿಂದ ಎಟಿಎಂ ಕಾರ್ಡ್ ಕದ್ದು ಐಶಾರಾಮಿ ಜೀವನ ನಡೆಸುತ್ತಿದ್ದ ಖತರ್ನಾಕ್ ಕಳ್ಳನನ್ನು ಮಳವಳ್ಳಿ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.

ಎಟಿಎಂ ಕಾರ್ಡ್ ಕಳ್ಳನ ಬಂಧನ
ಎಟಿಎಂ ಕಾರ್ಡ್ ಕಳ್ಳನ ಬಂಧನ
ಅಮಾಯಕರು ಹಣ ಡ್ರಾ ಮಾಡುವಾಗ ಸಹಾಯ ಮಾಡುವ ನೆಪದಲ್ಲಿ ವಂಚಿಸಿ ಕಾರ್ಡ್ ಅಪಹರಿಸುತ್ತಿದ್ದ, ಬಳಿಕ ಹಣ ಡ್ರಾ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5.10 ಲಕ್ಷದ ವಂಚಿಸಿದ್ದಾನೆ ಎಂದು ತಿಳಿದು ಬಂದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.