ಮಂಡ್ಯ: ನಟ ಹುಚ್ಚ ವೆಂಕಟ್ ಮೇಲೆ ನಡೆದ ಹಲ್ಲೆ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ. ಈ ಕುರಿತು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಚ್ಚ ವೆಂಕಟ್ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಪತ್ತೆಗೆ ಖಾಕಿ ತಲಾಶ್ - ಹುಚ್ಚ ವೆಂಕಟ್
ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ ಪ್ರಕರಣ ಕುರಿತು ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ. ಈ ಕುರಿತು ವಿಡಿಯೋ ತೆಗೆದುಕೊಂಡು ಯುವಕರನ್ನು ಗುರುತಿಸಲಾಗ್ತಿದ್ದು, ಶೀಘ್ರದಲ್ಲೇ ಅವರನ್ನು ದಸ್ತಗಿರಿ ಮಾಡಲಾಗುತ್ತದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.
ಹುಚ್ಚ ವೆಂಕಟ್ ಸಂಜೆ 7 ಗಂಟೆ ಸುಮಾರಿಗೆ ಉಮ್ಮಡಹಳ್ಳಿ ಗೇಟ್ ಬಳಿಯ ಅಕ್ರಂ ಪಾಷಾ ಟೀ ಸ್ಟಾಲ್ನಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಸ್ಥಳೀಯ ಯುವಕರ ಜೊತೆ ಮಾತಿನ ಚಕಮಕಿ ನಡೆದಿದ್ದು, 5ರಿಂದ 6 ಜನ ಯುವಕರ ಗುಂಪು ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದೆ. ಅಲ್ಲದೆ ಕಾಲಿನಿಂದ ತುಳಿದು ಹಲ್ಲೆ ಮಾಡಿ ಯುವಕರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಟೀ ಶಾಪ್ ಮಾಲೀಕ ಅಕ್ರಂ ಪಾಷಾ ದೂರು ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಈ ಕುರಿತು ವಿಡಿಯೋ ತೆಗೆದುಕೊಂಡು ಯುವಕರನ್ನು ಗುರುತಿಸಲಾಗ್ತಿದೆ. ಶೀಘ್ರದಲ್ಲೇ ಅವರನ್ನು ದಸ್ತಗಿರಿ ಮಾಡಲಾಗುತ್ತದೆ ಎಂದರು.
ಹುಚ್ಚ ವೆಂಕಟ್ ಯಾವ ಸ್ಥಿತಿಯಲ್ಲಿದ್ದರೋ ಗೊತ್ತಿಲ್ಲ. ಅವರು ಬಹಳ ಕಡೆ ಈ ರೀತಿ ಹೋಗಿ ಗಲಾಟೆ ಮಾಡಿಕೊಂಡಿದ್ದಾರೆ. ಇಲ್ಲಿ ಸ್ಪಷ್ಟವಾಗಿರುವ ವಿಡಿಯೋ ಸಿಕ್ಕಿದೆ. ತನಿಖೆ ಮಾಡುತ್ತೇವೆ ಎಂದರು. ಈ ರೀತಿ ಕಂಡು ಬಂದರೆ ಸ್ಥಳೀಯ ಪೊಲೀಸರಿಗೆ ತಿಳಿಸಿ. ಯಾರ ಮೇಲೂ ಹಲ್ಲೆ ಮಾಡುವುದು ಒಳ್ಳೆಯದಲ್ಲ. ಅದು ಕಾನೂನಿನ ವಿರುದ್ಧವಾಗಿರುತ್ತೆ. ಅಂತವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.