ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮತ್ತೆ ಶುರುವಾಯ್ತು ರೌಡಿಸಂ : ಹಾಡಹಗಲೇ ಯುವಕನ ಮೇಲೆ ಹಲ್ಲೆ - ಮಂಡ್ಯದಲ್ಲಿ ಶುರುವಾಯ್ತು ರೌಡಿಸಂ

ಸಕ್ಕರೆ ನಾಡಲ್ಲಿ ಮತ್ತೆ ರೌಡಿ ಚಟುವಟಿಕೆ ತಲೆ ಎತ್ತಿದೆ. ಹಾಡ ಹಗಲೇ ನಗರದಲ್ಲಿ ಕೊಲೆ ಯತ್ನ ನಡೆದಿದ್ದು, ರೌಡಿ ಶೀಟರ್ ಅನಿಲ್ ಕುಮಾರ್ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಡಹಗಲೇ ಯುವಕನ ಮೇಲೆ ಹಲ್ಲೆ

By

Published : Aug 24, 2019, 11:37 AM IST

Updated : Aug 24, 2019, 1:08 PM IST

ಮಂಡ್ಯ:ಸಕ್ಕರೆ ನಾಡಲ್ಲಿ ಮತ್ತೆ ರೌಡಿ ಚಟುವಟಿಕೆ ತಲೆ ಎತ್ತಿದೆ. ಹಾಡಹಗಲೇ ನಗರದಲ್ಲಿ ಕೊಲೆ ಯತ್ನ ನಡೆದಿದ್ದು, ರೌಡಿ ಶೀಟರ್ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮಂಡ್ಯದಲ್ಲಿ ಮತ್ತೆ ಶುರುವಾಯ್ತು ರೌಡಿಸಂ

ಗಾಯಾಳು ಯುವಕನನ್ನು ಸ್ಥಳದಲ್ಲೇ ಇದ್ದ ಪೊಲೀಸರು ರಕ್ಷಣೆ ಮಾಡಿದ್ದಾರೆ. ಹಲ್ಲೆ ಮಾಡಿದ ರೌಡಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರದ ಸಂಜಯ ವೃತ್ತದಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಕೆಂಪೇಗೌಡ ನಗರದ ಅನಿಲ್ ಕುಮಾರ್ ಗಾಯಗೊಂಡ ಯುವಕನಾಗಿದ್ದಾನೆ. ಹಲ್ಲೆ ಮಾಡಿದ ವ್ಯಕ್ತಿ ಚಿಕ್ಕಮಂಡ್ಯದ ರೌಡಿ ಶೀಟರ್ ಪ್ರವೀಣ್ ಅಲಿಯಾಸ್ ಪಲ್ಲಿ ಎಂದು ಹೇಳಲಾಗಿದ್ದು, ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Last Updated : Aug 24, 2019, 1:08 PM IST

ABOUT THE AUTHOR

...view details