ಕರ್ನಾಟಕ

karnataka

ETV Bharat / state

ಕುಖ್ಯಾತ ಆಟೋ ಕಳ್ಳರ ಬಂಧನ: 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ - ETV Bharath Kannada

ಮಂಡ್ಯ ಅಲ್ಲದೇ ಹೊರ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಗುಂಪನ್ನು ಹಲಗೂರು ಪೊಲೀಸರು ಬಂಧಿಸಿದ್ದು, ಇವರಿಂದ 15 ಲಕ್ಷ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

Etv Bharat
ಕುಖ್ಯಾತ ಆಟೋ ಕಳ್ಳರ ಬಂಧನ

By

Published : Dec 10, 2022, 10:55 AM IST

ಮಂಡ್ಯ:ಬಡವರು ಸಾಲ ಮಾಡಿ ತೆಗೆದುಕೊಂಡು ಜೀವನ ನಡೆಸುತ್ತಿದ್ದ ಆಟೋಗಳನ್ನೇ ಕದಿಯುತ್ತಿದ್ದ ಕಳ್ಳರನ್ನು ಗುಂಪನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಕನಕಪುರ, ಸಾತನೂರು, ಮೈಸೂರು, ಪಿರಿಯಾಪಟ್ಟಣ, ಬೈಲುಕುಪ್ಪೆ, ಪಟ್ಟಣ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ, ಮಳವಳ್ಳಿ ಟೌನ್ ವಾಸಿಗಳಾದ ಅರುಣ್, ಜಿ.ಆರ್.ಗಿರೀಶ್, ಪಿ.ಸಚಿನ್ ಬಂಧಿತ ಆರೋಪಿಗಳು.

ಇವರಿಂದ 15 ಲಕ್ಷ ಮೌಲ್ಯದ ಏಳು ಆಟೋ, ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಳವಳ್ಳಿ ಮತ್ತು ಹಲಗೂರು ವ್ಯಾಪ್ತಿಯಲ್ಲಿ ಸರಣಿ ಆಟೋ ಮತ್ತು ಸ್ಕೂಟರ್ ಕಳ್ಳತನವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ರಾತ್ರಿ ಗಸ್ತು ಹೆಚ್ಚು ಮಾಡುವಂತೆ ಆದೇಶಿಸಿದರು. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ತಂಡ ಮಂಡ್ಯ ಅಲ್ಲದೇ ಹೊರ ಜಿಲ್ಲೆಗಳಲ್ಲೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಕ್ರೈಂ ಸೀರಿಯಲ್ ನೋಡಿ ಪತಿ ಹತ್ಯೆಗೆ ಸ್ಕೆಚ್: ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟ ಪತ್ನಿ

ABOUT THE AUTHOR

...view details