ಮಂಡ್ಯ: ಒತ್ತುವರಿ ತೆರವು ವಿರೋಧಿಸಿದ ಚನ್ನಪಟ್ಟಣ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ 30ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮದ್ದೂರು ತಾಲೂಕಿನ ಗಡಿ ಭಾಗ ಬೊಮ್ಮನಾಯಕನಹಳ್ಳಿ ಬಳಿ ನಡೆದಿದೆ.
ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ: ಪ್ರತಿಭಟಿಸಿದ ರೈತರ ಬಂಧನ - ಮಂಡ್ಯ ರೈತರ ಸುದ್ದಿ
ಜಮೀನಲ್ಲಿ 10ಕ್ಕೂ ಹೆಚ್ಚಿನ ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದವು. ಈ ಜಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿದ ಹಿನ್ನೆಲೆ ತೆರವು ಕಾರ್ಯ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಮದ್ದೂರು ತಾಲೂಕಿನ ಗಡಿ ಭಾಗದ ಬೊಮ್ಮನಾಯಲನಹಳ್ಳಿ ಸಮೀಪ ಸರ್ಕಾರಿ ಜಮೀನಲ್ಲಿ 10ಕ್ಕೂ ಹೆಚ್ಚಿನ ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿದ್ದವು. ಈ ಜಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಿಸಲು ಉದ್ದೇಶಿಸಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿದ ಹಿನ್ನೆಲೆ ತೆರವು ಕಾರ್ಯ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
50 ವರ್ಷಗಳಿಂದ ಜಮೀನನಲ್ಲಿ ವ್ಯವಸಾಯ ಮಾಡುತ್ತಿದ್ದು, ನಾವು ಇದ್ನು ಬಿಡುವುದಿಲ್ಲ ಎಂದು ರೈತರು ಹೋರಾಟ ಮಾಡಿದ್ದಾರೆ.ಇದರ ನಡುವೆಯೂ ರೈತರು ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಭೂಮಿ ತೆರವು ಮಾಡಿದ್ದಾರೆ. ಈ ವೇಳೆ ಅಡ್ಡಿಪಡಿಸಲು ಬಂದ ರೈತರನ್ನು ಬಂಧಿಸಲಾಗಿದೆ.