ಮಂಡ್ಯ: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಸೋಂಕು ದಾಖಲಾಗಿದೆ.
ಮಂಡ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್: 30ಕ್ಕೇರಿದ ಸೋಂಕಿತರ ಸಂಖ್ಯೆ - mandya latest news
ಮಂಡ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಮುಂಬೈ ಸೋಂಕಿತರಿಂದ ಈ ಅನಾಹುತ ಉಂಟಾಗುತ್ತಿದೆ.
ಮಂಡ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್
ಮುಂಬೈನಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಈತ 28 ವರ್ಷದ ಯುವಕನಾಗಿದ್ದು ಈತನಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ತಬ್ಲಿಘಿ, ಜುಬಿಲಂಟ್ ಕಾರ್ಖಾನೆ ಬಳಿಕ ಇದಿಗ ಜಿಲ್ಲೆಗೆ ಮುಂಬೈ ಸೋಂಕಿನ ಕಂಟಕ ಎದುರಾಗಿದೆ.