ಮಂಡ್ಯ: ಜಗತ್ತನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿ ತೊಲಗಲಿ ಎಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಗ್ರಾಮದ ಜನರು ಪೂಜೆ ಮಾಡಿ ಪ್ರಾಣಿ ಬಲಿ ನೀಡಿ ಮೂಢನಂಬಿಕೆ ಮೊರೆ ಹೋಗಿದ್ದಾರೆ.
ಕೊರೊನಾ ತೊಲಗಿಸಲು ದೇವಿಗೆ ಬಲಿ: ಮೂಢನಂಬಿಕೆಯ ಮೊರೆ ಹೋದ ಜನ - corona in mandya
ಕೊರೊನಾ ಹೆಮ್ಮಾರಿ ತೊಲಗಲಿ ಎಂದು ದೇವಿಗೆ ಕುರಿ, ಕೋಳಿ, ಮೇಕೆ ಬಲಿ ಕೊಟ್ಟು ಹಬ್ಬ ಆಚರಿಸಿ ಬೇಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಗ್ರಾಮದದಲ್ಲಿ ನಡೆದಿದೆ.
ಚನ್ನಪಿಳ್ಳೆಕೊಪ್ಪಲು ಗ್ರಾಮಸ್ಥರು 20ಕ್ಕೂ ಹೆಚ್ಚು ಮೇಕೆ, ಕುರಿ ಮತ್ತು ಕೋಳಿಗಳನ್ನು ಸುಜ್ಜಲೂರು ಮಾರಮ್ಮ ದೇವಿಗೆ ಬಲಿ ಕೊಟ್ಟು ಕೊರೊನಾ ಮಹಾಮಾರಿ ತೊಲಗಲಿ ಎಂದು ಪ್ರಾರ್ಥಸಿದ್ದಾರೆ. ಗ್ರಾಮದ ಬೀದಿ ಬೀದಿಗೆ ತೋರಣ ಕಟ್ಟಿ ಗ್ರಾಮ ದೇವತೆಯ ಹಬ್ಬದ ರೀತಿ ಆಚರಣೆ ಮಾಡಿ ಕೊರೊನಾ ಬರದೇ ಇರಲಿ ಎಂದು ಬೇಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮಸ್ಥರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಣೆ ಮಾಡಿದ್ದೇವೆ. ಈ ಹಿಂದೆ ಗ್ರಾಮಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ಇದೇ ರೀತಿ ಹಬ್ಬಗಳನ್ನು ಮಾಡಿದ್ದೇವೆ. ಆಗ ರೋಗಗಳು ವಾಸಿಯಾಗಿವೆ ಎಂದು ಹೇಳಿದ್ದಾರೆ.
ಅನ್ ಲಾಕ್ ಭವಿಷ್ಯ ನಿರ್ಧರಿಸಲು ಸಿಎಂ ನೇತೃತ್ವದಲ್ಲಿ ಸಭೆ