ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವಾರು ಹೋರಾಟಗಾರರ ತ್ಯಾಗ ಬಲಿದಾನವಿದೆ: ಸಚಿವ ನಾರಾಯಣಗೌಡ - k c Narayana gowda

ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಬಲಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.

amrutha-mahotsava-programme-in-mandya
ಡಾ.ಕೆ.ಸಿ ನಾರಾಯಣಗೌಡ

By

Published : Mar 12, 2021, 10:17 PM IST

ಮಂಡ್ಯ: ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವು ಹೋರಾಟಗಾರರ ತ್ಯಾಗ ಬಲಿದಾನವಿದೆ. ಈ 75ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಅವರನ್ನು ಸ್ಮರಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ.ನಾರಾಯಣಗೌಡ ಕರೆ ನೀಡಿದರು.

ಮದ್ದೂರಿನ ಶಿವಪುರ ಸತ್ಯಾಗ್ರಹಸೌಧದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ

ಮದ್ದೂರಿನ ಶಿವಪುರ ಸತ್ಯಾಗ್ರಹಸೌಧದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭ ದೇಶದ 75 ಸ್ಥಳ, ನಗರಗಳಲ್ಲಿ ನಡೆಯುತ್ತಿದೆ. ಅದರಲ್ಲಿ ಮದ್ದೂರಿನ ಶಿವಪುರವೂ ಒಂದಾಗಿರುವುದು ಮಂಡ್ಯದವರಿಗೆ ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ನರೇಂದ್ರ ಮೋದಿ ದೇಶವನ್ನು ಬಲಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ ಎಂದ ಅವರು, ನಮ್ಮ ಜಿಲ್ಲೆಯಲ್ಲಿ ಆಲೆಮನೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಗಾಣ ನಡೆಸುವವರಿಗೆ ತಲಾ 25 ಲಕ್ಷ ರೂ. ಸಹಾಯಧನ ನೀಡಲು ಸರ್ಕಾರ ಮುಂದೆ ಬಂದಿದೆ ಎಂದು ತಿಳಿಸಿದರು.

ಓದಿ:ಓಸ್ಯಾಟ್ ಸಂಸ್ಥೆಯಿಂದ ಸರ್ಕಾರಿ ಶಾಲೆಯ ಉನ್ನತೀಕರಣ: ಸಚಿವ ಸುರೇಶ್ ಕುಮಾರ್​ರಿಂದ ಉದ್ಘಾಟನೆ

ಅಗ್ರಿ ಟೂರಿಸಂ ಮೂಲಕ ಕೃಷಿ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮ ಹಿರಿಯರು ದೇಶದ ಹೋರಾಟದಲ್ಲಿ ಒಂದು ಶಕ್ತಿಯನ್ನು ತುಂಬಿದ್ದಾರೆ. ಅವರ ಹೋರಾಟಕ್ಕೆ ಈ ದಿನ ಒಂದು ಗೌರವ ಸಲ್ಲಿಸುವ ಕೆಲಸ ನೆರವೇರಿದೆ ಎಂದರು.

ABOUT THE AUTHOR

...view details