ಮಂಡ್ಯ:ಇಲ್ಲಿನ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ 2,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಭಾಗಿಯಾಗಲಿದ್ದಾರೆ.
ಗೆಜ್ಜಲಗೆರೆ ಮನ್ಸುಲ್ ಆವರಣದಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿರುವ ಮೆಗಾಡೈರಿ, ಹಾಲಿನ ಪುಡಿ ಘಟಕ, ಬೆಣ್ಣೆ ಮತ್ತು ಉಪ ಉತ್ಪನ್ನಗಳ ಹೆಚ್ಚು ತಯಾರಿಕ ಹಾಗೂ ಪ್ಯಾಕಿಂಗ್ ಘಟಕ ಉದ್ಘಾಟನೆಯಾಗಲಿದೆ. ಈ ಡೈರಿಯಲ್ಲಿ 30 ಮೆಟ್ರಿಕ್ ಟನ್ ಹಾಲಿನ ಪುಡಿ, 2 ಮೆಟ್ರಿಕ್ ಟನ್ ಪನ್ನೀರ್, 10 ಮೆಟ್ರಿಕ್ ಟನ್ ಬೆಣ್ಣೆ, 12 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ತಯಾರಿಸುವ ಮತ್ತು 4 ಮೆಟ್ರಿಕ್ ಟನ್ ಕೋವಾ, 12 ಮೆಟ್ರಿಕ್ ಟನ್ ತುಪ್ಪ ಜೊತೆಗೆ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.