ಮಂಡ್ಯ: ಓವರ್ ಟೇಕ್ ಮಾಡಲು ಹೋಗಿ ಆ್ಯಂಬುಲೆನ್ಸ್ ಚರಂಡಿಗೆ ಸಿಲುಕಿದ ಘಟನೆ ಮದ್ದೂರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇಂದು ಸಂಭವಿಸಿದೆ.
ಚೆನ್ನಪಟ್ಟಣದಿಂದ ಮಂಡ್ಯ ಮೆಡಿಕಲ್ ಕಾಲೇಜಿಗೆ ಜೇನು ಕಡಿತಕ್ಕೊಳಗಾಗಿದ್ದ ರೋಗಿಯನ್ನು ಕೂರಿಸಿಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಚರಂಡಿಗೆ ಬಿದ್ದು ಸಿಲುಕಿದೆ. ಮದ್ದೂರಿನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ಚರಂಡಿಗೆ ಆ್ಯಂಬುಲೆನ್ಸ್ ಸಿಲುಕಿತ್ತು.