ಕರ್ನಾಟಕ

karnataka

ETV Bharat / state

ಕೂಲ್​ ಕ್ಯಾಪ್ಟನ್​​ ಧೋನಿಗೆ ಅಂಬರೀಶ್ 2 ಲಕ್ಷ ರೂ. ನೀಡಿದ್ದರಂತೆ.. ಯಾಕೆ ಅಂತಾ ಸಂಸದೆ ಸುಮಲತಾ ಹೇಳಿದಾರೆ.. - ಧೋನಿಗೆ ಅಂಬರೀಶ್​ ಸಹಾಯ

2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ವೇಳೆ ಉತ್ತಮ ಪ್ರದರ್ಶನ ತೋರಿದ್ದ ಧೋನಿ ಆಟ ನೋಡಿ ಅಂಬರೀಶ್ ಮನಸೋತಿದ್ದರು. ಜೊತೆಗೆ ಎಂ.ಎಸ್ ಡಿ ಕಷ್ಟವನ್ನು ತಿಳಿದು ಅವರಿಗೆ 2 ಲಕ್ಷ ರೂ. ಹಣ ಸಹಾಯ ಮಾಡಿದ್ದರು ಎಂಬ ಸತ್ಯ ಇದೀಗ ಬೆಳಕಿಗೆ ಬಂದಿದೆ..

ambarish-gave-two-lack-rupees-for-ms-dhoni
ಕೂಲ್​ ಕ್ಯಾಪ್ಟನ್​​ ದೋನಿ

By

Published : Aug 21, 2021, 5:02 PM IST

ಮಂಡ್ಯ :ಕನ್ನಡ ಚಿತ್ರರಂಗದ ಖ್ಯಾತ ನಟ ದಿವಂಗತ ಅಂಬರೀಶ್‍ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿಗೆ ಹಣ ನೀಡಿದ್ದರು ಎಂಬ ವಿಚಾರವನ್ನು ಸಂಸದೆ ಸುಮಲತಾ ಅವರು ಬಹಿರಂಗ ಪಡಿಸಿದ್ದಾರೆ.

ಸಂಸದೆ ಸುಮಲತಾ ಟ್ಟೀಟ್​​​

ಕಲಿಯುಗದ ಕರ್ಣ ಅಂಬರೀಶ್‍ರವರು ಕಷ್ಟ ಎಂದು ಮನೆಯ ಬಾಗಿಲಿಗೆ ಬಂದವರನ್ನು ಎಂದೂ ಖಾಲಿ ಕೈಯಲ್ಲಿ ಕಳುಹಿಸಿಲ್ಲ. ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಅಲ್ಲದೇ, ಚಂದನವನದ ಸೆಲಿಬ್ರೆಟಿಗಳ ಮಧ್ಯೆ ಯಾವುದೇ ಮನಸ್ತಾಪವಿದ್ದರೂ ಅಂಬರೀಶ್ ಅವರೇ ಸಂಧಾನ ಮಾಡುವ ಮೂಲಕ ಸಮಸ್ಯೆ ಬಗೆಹರಿಸುತ್ತಿದ್ದರು.

ಸದ್ಯ ಅಂಬರೀಶ್‍ರವರು ಒಂದು ಕಾಲದಲ್ಲಿ ಕೂಲ್ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿಗೆ 2 ಲಕ್ಷ ರೂ. ಹಣ ನೀಡಿರುವ ಬಗ್ಗೆ ಸುಮಲತಾರವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂಬರೀಶ್‍ರವರು ಮಾಡಿದ ಮಾನವೀಯ ಕಾರ್ಯಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಯಾಕೆಂದರೆ, ಅವರು ಮಾಡುವ ದಾನದ ಬಗ್ಗೆ ಎಲ್ಲಿಯೂ ಪ್ರಚಾರ ಮಾಡಿಕೊಳ್ಳುತ್ತಿರಲಿಲ್ಲ. ಅನಿರೀಕ್ಷಿತವಾಗಿ ಈ ಬಗ್ಗೆ ನಾನು ತಿಳಿದಾಗ ನನಗೆ ಸರ್ಪೈಸ್​​​ ಆಗಿತ್ತು. ಆದರೆ, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅವರನ್ನು ಪ್ರೀತಿಸುವ ಜನರೇ ದಾನಶೂರ ಕರ್ಣ ಎಂದು ಅಂಬರೀಶ್‍ರನ್ನು ಕರೆಯುತ್ತಾರೆ ಎಂದು ಬರೆದುಕೊಂಡಿದ್ದಾರೆ.

2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ವೇಳೆ ಉತ್ತಮ ಪ್ರದರ್ಶನ ತೋರಿದ್ದ ಧೋನಿ ಆಟ ನೋಡಿ ಅಂಬರೀಶ್ ಮನಸೋತಿದ್ದರು. ಜೊತೆಗೆ ಎಂ.ಎಸ್ ಡಿ ಕಷ್ಟವನ್ನು ತಿಳಿದು ಅವರಿಗೆ 2 ಲಕ್ಷ ರೂ. ಹಣ ಸಹಾಯ ಮಾಡಿದ್ದರು ಎಂಬ ಸತ್ಯ ಇದೀಗ ಬೆಳಕಿಗೆ ಬಂದಿದೆ.

ABOUT THE AUTHOR

...view details