ಮಂಡ್ಯ:ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಜಾತಿ ಕೆಣಕಿದ ಸಂಸದ ಶಿವರಾಮೇಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅಂಬಿ ಅಭಿಮಾನಿಗಳು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಲತಾ ಜಾತಿ ಕೆಣಕಿದ ಶಿವರಾಮೇಗೌಡ ವಿರುದ್ಧ ಅಂಬಿ ಅಭಿಮಾನಿಗಳ ಪ್ರತಿಭಟನೆ - ಅಂಬಿ ಅಭಿಮಾನಿ
ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಜಾತಿ ವಿಚಾರ ಮಾತನಾಡಿರುವವರ ವಿರುದ್ಧ ಅಂಬರೀಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ದೂರು-ಕೊಳ್ಳೇಗಾಲ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಅಭಿಮಾನಿಗಳು, ಶಿವರಾಮೇಗೌಡ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ನಿನ್ನೆ ರಾತ್ರಿಯಷ್ಟೆ ಸುಮಲತಾ ಅವರು ಆಂಧ್ರದ ನಾಯ್ಡು, ಗೌಡ್ತಿಯಲ್ಲ ಅಂತ ಹೇಳಿದ್ದ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮದ್ದೂರು ಪಟ್ಟಣದಲ್ಲಿ ಹೋರಾಟ ಮಾಡಿದರು. ಮದ್ದೂರು-ಕೊಳ್ಳೇಗಾಲ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಅಭಿಮಾನಿಗಳು, ಶಿವರಾಮೇಗೌಡ ಕೂಡಲೇ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.
ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಗೂ ಸಂಸದ ಶಿವರಾಮೇಗೌಡ ಜಾತಿ ವಿಚಾರ ಎತ್ತಿದ್ದಾರೆ. ಅಂಬರೀಶ್ ಸೋಲಿಸಿದ್ದು ನಾನೇ, ದುಡ್ಡು ಕೊಟ್ಟು ಗೆಲ್ಲಿಸಿದ್ದು ನಾನು, ನಾನೇ ನಿಜವಾಗ್ಲೂ ನಾಗಮಂಗಲದ ಗಂಡು ಎಂದು ಹೇಳಿದ್ದರು. ಜೆಡಿಎಸ್ ನಾಯಕರು ಹೀಗೆ ನಾಲಿಗೆ ಹರಿ ಬಿಟ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾದೀತು ಎಂದು ಅಂಬಿ ಅಭಿಮಾನಿಗಳು ಎಚ್ಚರಿಕೆ ನೀಡಿದರು.