ಕರ್ನಾಟಕ

karnataka

ETV Bharat / state

ಅಂಬರೀಶ್, ಸುಮಲತಾ ಬಗ್ಗೆ ಹಗುರ ಮಾತನಾಡಿದರೆ ಎಚ್ಚರ: ಅಭಿಮಾನಿಗಳ​ ಎಚ್ಚರಿಕೆ - ಅಂಬರೀಶ್ ಹಾಗೂ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಿದರೆ ಎಚ್ಚರ

ಅಂಬರೀಶ್ ಹಾಗೂ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಿದರೆ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಘೇರಾವು ಮಾಡಲಾಗುವುದು ಎಚ್ಚರಿಸಿದ್ದಾರೆ.

ಅಂಬಿ ಫ್ಯಾನ್ಸ್​ ಖಡಕ್ ವಾರ್ನಿಂಗ್​
ಅಂಬಿ ಫ್ಯಾನ್ಸ್​ ಖಡಕ್ ವಾರ್ನಿಂಗ್​

By

Published : Jul 9, 2021, 4:20 PM IST

ಮಂಡ್ಯ: ಹಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರದ ಬಗ್ಗೆ ನಡೆಯುತ್ತಿರುವ ಗಲಾಟೆಯ ಬಗ್ಗೆ ದಳಪತಿಗಳಿಗೆ ಅಂಬರೀಶ್ ಫ್ಯಾನ್ಸ್ ವಾರ್ನಿಂಗ್ ನೀಡಿದ್ದಾರೆ‌. ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ನೀಡುವಂತೆ ಅಂಬರೀಶ್ ಅಭಿಮಾನಿಗಳು ಆಗ್ರಹಿಸಿದರಲ್ಲದೇ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದಾರೆ.

ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಅಂಬಿ ಅಭಿಮಾನಿಗಳಿಂದ ಹೋರಾಟ ನಡೆಸಲಾಗುವುದು, ಹಾಗೆಯೇ ಅಕ್ರಮ ಗಣಿಗಾರಿಕೆ ವಿಚಾರವನ್ನ ಸಿಬಿಐ ತನಿಖೆ ನಡೆಸುವಂತೆ ಒತ್ತಾಯ ಮಾಡಲಾಗುವುದು. ಅಂಬರೀಶ್ ಹಾಗೂ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಿದರೆ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಘೇರಾವು ಮಾಡಲಾಗುವುದು ಎಚ್ಚರಿಸಿದರು.

ಇದನ್ನೂ ಓದಿ: ಅಂಬರೀಶ್ ಸ್ಮಾರಕ ಮಾಡಿದ್ದು ಯಡಿಯೂರಪ್ಪ ಅಂತ ಎದೆತಟ್ಟಿ ಹೇಳಬಲ್ಲೆ: ಹಿರಿಯ ನಟ ದೊಡ್ಡಣ್ಣ

ABOUT THE AUTHOR

...view details