ಕರ್ನಾಟಕ

karnataka

ETV Bharat / state

ಮಂಡ್ಯ ಸೊಸೆಯಾಗಿ ಹಾವೇರಿಯಿಂದ 'ಒಲವಿನ ಉಡುಗೊರೆ' ಹಿಡಿದು ಬಂದ ಸುಮಲತಾ ಅಭಿಮಾನಿ

ಮದ್ದೂರು ತಾಲೂಕಿನ ಹೊಸಕೆರೆಯ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸುಮಲತಾ ಅಭಿಮಾನಿ ಹಾಗೂ ಅಂಬರೀಶ್​ ಅಭಿಮಾನಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

By

Published : Mar 7, 2021, 11:53 AM IST

Updated : Mar 8, 2021, 9:08 AM IST

Ambarish and Sumalatha fan wedding in mandya
ಅಂಬಿ ಅಭಿಮಾನಿ ಕೈ ಹಿಡಿದ ಹಾವೇರಿಯ ಸುಮಲತಾ ಅಭಿಮಾನಿ

ಮಂಡ್ಯ:ಸುಮಲತಾರಂತೆ ಮಂಡ್ಯ ಸೊಸೆಯಾಗಬೇಕು, ಅದ್ರಲ್ಲೂ ಅಂಬಿ ಅಭಿಮಾನಿಯನ್ನೇ ಮದುವೆಯಾಗಬೇಕೆಂಬುದು ಹಾವೇರಿ ಜಿಲ್ಲೆಯ ಯುವತಿಯ ದೊಡ್ಡ ಕನಸಾಗಿತ್ತು. ಇಷ್ಟೇ ಅಲ್ಲಾ, ಈಕೆ ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ ಅವಳ ಆ ಕನಸು ಈಗ ನನಸಾಗಿದ್ದು, ಮಂಡ್ಯದ ಗಂಡನ್ನೇ ವರಿಸಿದ್ದಾಳೆ. ದಾಂಪತ್ಯಕ್ಕೆ ಕಾಲಿಟ್ಟ ಆ ನವ ಜೋಡಿಗೆ ಸಂಸದೆ ಸುಮಲತಾ ಅಂಬರೀಶ್​ ಆಶೀರ್ವಾದ ಮಾಡಿದ್ದಾರೆ.

ಯುವತಿಯ ಹೆಸರು ಸವಿತಾ. ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದ ಲಲಿತಮ್ಮ ಹಾಗೂ ಲೇ.ತಿಪ್ಪಣ್ಣ ದಂಪತಿಯ ಹಿರಿಯ ಪುತ್ರಿ. ಈಕೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿ. ಸುಮಲತಾ ಅವರನ್ನ ಅಮ್ಮ ಅಂತಾನೇ ಕರೆಯುವ ಸವಿತಾ ದೊಡ್ಡ ಕನಸು ಕಟ್ಟಿಕೊಂಡಿದ್ದಳು. ತಾನು ಅವರಂತೆ ಮಂಡ್ಯದ ಸೊಸೆಯಾಗಬೇಕು, ಅದರಲ್ಲೂ ಅಂಬರೀಶ್ ಅಂಭಿಮಾನಿಯನ್ನೇ ಮದುವೆಯಾಗಬೇಕೆಂಬುದು. ಅಂತೂ ಸವಿತಾಳ ಕನಸು ನನಸ್ಸಾಗಿದ್ದು, ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದ ಶ್ರೀನಿವಾಸ್ ಎಂಬಾತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಳೆ.

ಅಂಬಿ ಅಭಿಮಾನಿ ಕೈ ಹಿಡಿದ ಹಾವೇರಿಯ ಸುಮಲತಾ ಅಭಿಮಾನಿ

ಓದಿ : ಬರದ ನಾಡಲ್ಲಿ ಬಂಗಾರದ ಬೆಳೆ: ಕಂಪನಿ ಕೆಲಸ ಬಿಟ್ಟ ಸ್ವಾಭಿಮಾನಿ ರೈತನಿಗೆ ಲಕ್ಷಾಂತರ ರೂ. ಆದಾಯ

ಸವಿತಾಳ ತಂದೆ ತಿಪ್ಪಣ್ಣ 10 ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ತಾಯಿ ಲಲಿತಮ್ಮ ಕ್ಯಾಂಟೀನ್ ಇಟ್ಟುಕೊಂಡು ಇಬ್ಬರು ಹೆಣ್ಣು ಮಕ್ಕಳನ್ನ ಸಾಕಿದ್ದಾರೆ. ಸವಿತಾ ಪಿಯುಸಿವರೆಗೂ ಓದಿಸಿದ್ದು, ಬಳಿಕ ಕ್ಯಾಂಟೀನ್ ನಲ್ಲಿ ತಾಯಿಗೆ ಸಹಾಯ ಮಾಡಿಕೊಂಡಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಫೇಸ್​ಬುಕ್ ಪೇಜ್ ನಲ್ಲಿ ಆ್ಯಕ್ಟೀವ್ ಆಗಿದ್ದ ಸವಿತಾಗೆ, ಫೇಸ್​ಬುಕ್ ನಲ್ಲೇ ಫ್ರೆಂಡ್ ಆಗಿದ್ದ ಅಂಬಿ ಅಭಿಮಾನಿ ಶ್ರೀನಿವಾಸ್ ಜೊತೆ ತನ್ನ ಕನಸನ್ನು ಹಂಚಿಕೊಂಡಿದ್ದಳು. ಇಬ್ಬರು ಎರಡು ಕುಟುಂಬಗಳನ್ನ ಒಪ್ಪಿಸಿ ಹಸಮಣೆ ಏರಿದ್ದಾರೆ.

ಮದ್ದೂರು ತಾಲೂಕಿನ ಹೊಸಕೆರೆಯ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸರಳ ವಿವಾಹಕ್ಕೆ ಬಂದ ಸಂಸದೆ ಸುಮಲತಾ, ನವ ಜೋಡಿಗೆ ಶುಭ ಹಾರೈಸಿ, ಮಂಡ್ಯ ಸೊಸೆಯಾಗಿರುವ ಸವಿತಾಗೆ ಮಂಡ್ಯದ ಸೇವೆ ಮಾಡುವ ಅವಕಾಶ ಬರಲಿ ಎಂದು ಆಶೀರ್ವದಿಸಿದರು.

Last Updated : Mar 8, 2021, 9:08 AM IST

ABOUT THE AUTHOR

...view details