ಮಂಡ್ಯ: ಮಳವಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಟಿಪ್ಪರ್ ಲಾರಿ ತಡೆಹಿಡಿದು ಚಾಲಕನ ಬಳಿ ಆರ್‌ಟಿಓ ಜೀಪ್ ಚಾಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಗೋವಿಂದರಾಜು ಅವರಿಗೆ ಸೇರಿದ ಟಿಪ್ಪರ್ ಲಾರಿಯನ್ನು ಸೆ. 21ರಂದು ಮಳವಳ್ಳಿ ಬಳಿ ಆರ್‌ಟಿಒ ಜೀಪ್ ಚಾಲಕ ನಾಗರಾಜು, ಸುರೇಶ್, ಅರುಣ ಮತ್ತು ಇತರರು ತಡೆಹಿಡಿದಿದ್ದರು. ನಂತರ 6 ಸಾವಿರ ರೂ. ಕೊಡುವಂತೆ ಲಂಚಕ್ಕೆ ಒತ್ತಾಯಿಸಿದ್ದರು ಎಂದು ಲಾರಿ ಚಾಲಕ ಆರೋಪಿಸಿದ್ದಾನೆ.
ಆರ್‌ಟಿಒ ಜೀಪ್ ಚಾಲಕನಿಂದ ಲಂಚಕ್ಕೆ ಬೇಡಿಕೆ ಹಣ ನೀಡದಿದ್ದರೆ ಕೇಸ್ ದಾಖಲಿಸಲಾಗುವುದು ಎಂದು ಹೆದರಿಸಿದ ವೇಳೆ 3 ಸಾವಿರ ರೂ. ಕೊಡುತ್ತೇನೆ ಎಂದಾಗ ಕೆಲ ಸಮಯ ಸತಾಯಿಸಿ ಹಣ ಪಡೆದು ಲಾರಿಯನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗ್ತಿದೆ.
ಇದಾದ ಅರ್ಧ ಗಂಟೆ ಬಳಿಕ ಜೀಪ್ ಡ್ರೈವರ್ ನಾಗರಾಜು ಕಿರುಗಾವಲು ಮಾರ್ಗವಾಗಿ ಹೋಗುತ್ತಿದ್ದ ನನ್ನ ಲಾರಿಯನ್ನು ಮತ್ತೆ ನಿಲ್ಲಿಸಿದರು. ನಂತರ ಜೊತೆಯಲ್ಲಿದ್ದ ಸಹಾಯಕರನ್ನು ನನ್ನ ಲಾರಿಯಲ್ಲಿ ಕೂರಿಸಿ ಮಳವಳ್ಳಿ ಕಡೆಗೆ ಕರೆತಂದು ತೂಕ ಮತ್ತು ಅಳತೆ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ತೂಕ ಮಾಡಿಸಿ ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾನೆ.
ಓದಿ:ಡಯಾಲಿಸಿಸ್ ಸೇವೆಯಲ್ಲಿನ ಸಮಸ್ಯೆ ಒಂದು ತಿಂಗಳಲ್ಲಿ ಸರಿಪಡಿಸ್ತೀವಿ: ಸಚಿವ ಡಾ.ಕೆ.ಸುಧಾಕರ್